

ಮಂಗಳೂರು ಫೆಬ್ರವರಿ 09: ಸರಗಳ್ಳರು ಮಹಿಳೆಯೊಬ್ಬರ ಚಿನ್ನದ ಸರ ಕಸಿದು ಪರಾರಿಯಾದ ಘಟನೆ ಬೋಳೂರು ಮಠದ ಕಣಿಯಲ್ಲಿನ ರಸ್ತೆಯಲ್ಲಿ ನಡೆದಿದೆ.
ಇಂದು ಮಧ್ಯಾಹ್ನದ ಸಮಯ ಈ ಘಟನೆ ನಡೆದಿದ್ದು, ಮಹಿಳೆ ಬೋಳೂರು ಮಠದ ಕಣಿಯಲ್ಲಿನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬೈಕ್ ನಲ್ಲಿ ಬಂದ ಅಪರಿಚಿತ ವ್ಯಕ್ತಿ ಅವರ ಕುತ್ತಿಗೆಗೆ ಕೈಹಾಕಿ ಸರ ಕಸಿದು ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ.
ಸ್ಥಳಕ್ಕೆ ಡಿಸಿಪಿ ದಿನೇಶ್ ಕುಮಾರ್, ಬರ್ಕೆ ಠಾಣಾಧಿಕಾರಿಗಳು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಚಿನ್ನದ ಸರ ಸುಮಾರು 40 ಗ್ರಾಂ ತೂಕ ವಿತ್ತು ಎಂದು ತಿಳಿದು ಬಂದಿದೆ.
add a comment