ರಾಜ್ಯ

ಬಿಜೆಪಿ ಹೀನಾಯ ಸೋಲಿನ ಹೊಣೆ ಹೊತ್ತ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್.

ಮಂಗಳೂರು ಮೇ 13: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿದ್ದು, ಸೋಲಿನ ಹೊಣೆ ಹೊರುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಶನಿವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಯಕರ್ತರಿಗೆ ಧನ್ಯವಾದ ತಿಳಿಸುತ್ತೇನೆ. ನಮ್ಮ ಸರ್ಕಾರ ಒಳ್ಳೆಯ ಕೆಲಸ ಮಾಡಿದರೂ ಅನಿರೀಕ್ಷಿತ ಫಲಿತಾಂಶ ಬಂದಿದೆ. ಬಿಜೆಪಿಗೆ ಹಿನ್ನಡೆಯಾಗಿದೆ .ಇಡೀ ಸೋಲಿನ ಜವಾಬ್ದಾರಿಯನ್ನು ರಾಜ್ಯಧ್ಯಕ್ಷನಾಗಿ ನಾನು ಹೊರುತ್ತೇನೆ ಎಂದು ಹೇಳಿದರು.

ಸೋಲಿಗೆ ಕಾರಣಗಳನ್ನು, ಫಲಿತಾಂಶವನ್ನು ಅವಲೋಕನ ಮಾಡುತ್ತೇವೆ. ಜನಾದೇಶವನ್ನು ಸ್ವೀಕರಿಸುತ್ತೇವೆ. ಯಾವ ಕಾರಣಕ್ಕೆ ಹಿನ್ನೆಡೆಯಾಗಿದೆ ಎಂದು ಅವಲೋಕನ ಮಾಡುತ್ತೇವೆ. ಕೆಲವು ಕಡೆ ಗೆಲ್ಲಲು ಸಾಧ್ಯ ಇಲ್ಲದೆ ಇರುವ ಕಡೆ ಕೂಡಾ ಗೆದ್ದಿದ್ದೇವೆಂದು ತಿಳಿಸಿದರು.

Leave a Response

error: Content is protected !!