ರಾಜ್ಯ

ಮಂಗಳೂರು ಒಕ್ಕಲಿಗರ ಯುವ ಘಟಕಅಧ್ಯಕ್ಷರಾಗಿ ಎಂ .ಬಿ ಕಿರಣ್ ಬುಡ್ಲೆಗುತ್ತು ಆಯ್ಕೆ.

ಒಕ್ಕಲಿಗರ ಗೌಡ ಸೇವಾ ಸಂಘ ಚಿಲಿಂಬಿ ಮಂಗಳೂರು ಯುವ ಘಟಕ ಮತ್ತು ಮಹಿಳಾ ಘಟಕದ ಆಯ್ಕೆಯ ಚುನಾವಣೆ ಪ್ರಕ್ರಿಯೆಯು ಒಕ್ಕಲಿಗ ಸಂಘದ ಆಡಳಿತ ಮಂಡಳಿಯ ಸಭೆಯಲ್ಲಿ ಶನಿವಾರ (ಜು.೧೫) ನಡೆಯಿತು. ಯುವ ಘಟಕದ ಅಧ್ಯಕ್ಷರಾಗಿ ಎಂ .ಬಿ ಕಿರಣ್ ಬುಡ್ಲೆಗುತ್ತು ಚುನಾಯಿತರಾದರು
ಕಾರ್ಯದರ್ಶಿ ಸ್ಥಾನಕ್ಕೆ ಇಬ್ಬರನ್ನು ಸೂಚಿಸಿರುವುದರಿಂದ ಯುವ ನಿರ್ದೇಶಕರು ಕೈ ಎತ್ತಿ ಮತದಾನ ಪ್ರಕ್ರಿಯೆ ನಡೆಸಿದರು. ಕಿರಣ್ ಬುಡ್ಲೆಗುತ್ತುರವರ ಆಪ್ತ ಕಿರಣ್ ಹೊಸೊಳಿಕೆ ೧೬ ಮತ ಪಡೆದರು. ರಾಘವೇಂದ್ರ ಅವರು ೧ ಮತ ಪಡೆದು ಪರಾಜಿತಾರಾದರು.ಉಪಾಧ್ಯಕ್ಷರಾಗಿ ಮಹೇಶ್ ನಡುತೋಟ, ಖಜಾಂಚಿಯಾಗಿ ಚೇತನ್ ಕೊಕ್ಕಡ, ಜತೆಕಾರ್ಯದರ್ಶಿಯಾಗಿ ಮಹೇಶ್ ಮೊಂಟಡ್ಕ ಆಯ್ಕೆಯಾದರು. ಮಹಿಳಾ ಘಟಕದ ಅಧ್ಯಕ್ಷರಾಗಿ ಪೂರ್ಣಿಮಾ ಕೆ.ಎಂ, ಕಾರ್ಯದರ್ಶಿಗಳಾಗಿ ಸರಿಕಾ ಸುರೇಶ್, ಉಪಾಧ್ಯಕ್ಷರಾಗಿ ಸುನಂದ ಡಿ.ಆರ್, ಖಜಾಂಚಿಯಾಗಿ ಡಾ. ಅರುಣಾ ರಾಜೇಶ್‌, ಜತೆ ಕಾರ್ಯದರ್ಶಿಯಾಗಿ ತಾರಮತಿ ಭಾಸ್ಕರ್ ಆಯ್ಕೆಯಾದರು. ಈ ಸಂದರ್ಭದಲ್ಲಿ ಚುನಾವಣೆ ಆಯ್ಕೆ ಪ್ರಕ್ರಿಯೆಯನ್ನು ಸಂಘದ ಅಧ್ಯಕ್ಷ ಗುರುದೇವ್ , ಕಾರ್ಯದರ್ಶಿ ಡಿ ಬಿ ಬಾಲಕೃಷ್ಣ ನಡೆಸಿಕೊಟ್ಟರು . ಖಜಾಂಚಿ ನವೀನ್ ಚಿಲ್ಪಾರ್‌, ಉಪಾಧ್ಯಕ್ಷ ಪುರುಷೋತ್ತಮ್, ಜತೆ ಕಾರ್ಯದರ್ಶಿ ರಾಮಚಂದ್ರ ಹಾಗೂ ಆಡಳಿತ ಮಂಡಳಿ ನಿದ್ರೇಶಕರು ಉಪಸ್ಥಿತರಿದ್ದರು. ಇತ್ತೀಚೆಗೆ ಮಂಗಳೂರಿನ ಗಣಪತಿ ಹೈಸ್ಕೂಲ್ ನಲ್ಲಿ ಒಕ್ಕಲಿಗ ಗೌಡ ಸೇವಾ ಸಂಘ ಚಿಲಿಂಬಿ (ರಿ) ಮಂಗಳೂರು ಆಡಳಿತ ಮಂಡಳಿಯ ೨೧ ನಿರ್ದೇಶಕರ ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ೨೧ ನಿರ್ದೇಶಕರಲ್ಲಿ ಅತೀ ಹೆಚ್ಚು ಮತಪಡೆದು ಕಿರಣ್ ಬುಡ್ಲೆಗುತ್ತು ಚುನಾಯಿತರಾಗಿದ್ದರು.ಹಾಗೂ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಪ್ರತಿಮೆ ಸ್ಥಾಪನ ಸಮಿತಿ (ರಿ) ಮಂಗಳೂರು ಇದರ ಅದ್ಯಕ್ಷರಾಗಿ ಕಿರಣ್ ಬುಡ್ಲೆಗುತ್ತು ಪ್ರತಿಮೆ ನಿರ್ಮಾಣ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

Leave a Response

error: Content is protected !!