ರಾಜ್ಯ

ಮಂಗಳೂರು ಖಾಸಗಿ ಬಸ್ ಚಾಲಕನ ಅಜಾಗರುಕತೆಗೆ ಬಾಲಕ ಬಲಿ.

ಮಂಗಳೂರು ಮಾರ್ಚ್ 24 : ಬಸ್ ಒಂದು ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಪುಟ್ಟ ಬಾಲಕ ಬಸ್ ನಡಿಗೆ ಬಿದ್ದು ಸಾವನಪ್ಪಿರುವ ಘಟನೆ ನಗರದ ಬೆಂದೂರ್‌ವೆಲ್‌ನಲ್ಲಿ ನಡೆದಿದೆ. ಘಟನೆಯಲ್ಲಿ ಮಗುವಿನ ತಾಯಿ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.


ಮೃತಪಟ್ಟ ಮಗುವನ್ನು ಹಾರ್ದಿಕ್‌(11) ಎಂದು ಗುರುತಿಸಲಾಗಿದೆ. ಇಂದು ಸಂಜೆ ಸ್ವಾತಿ ತನ್ನ ಮಗುವಿನೊಂದಿಗೆ ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಳೆ ಬಸ್‌ ಚಾಲಕನ ನಿರ್ಲಕ್ಷ್ಯದಿಂದ ಚಲಾಯಿಸಿದ ಪರಿಣಾಮ ಸ್ಕೂಟಿಯ ಹ್ಯಾಂಡಲ್‌ ಬಸ್‌ಗೆ ತಾಗಿ ಮಗುವಿನ ಸಮೇತ ತಾಯಿ ಕೆಳಗೆ ಬಿದ್ದಿದ್ದಾರೆ.
ಈ ವೇಳೆ ಬಸ್‌ನ ಚಕ್ರದಡಿಗೆ ಮಗು ಸಿಲುಕಿ ಮೃತಪಟ್ಟಿದೆ. ಘಟನೆಯಲ್ಲಿ ತಾಯಿ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಮಂಗಳೂರು ನಗರ ಪೂರ್ವ ಟ್ರಾಫಿಕ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ವಾತಿ ಅವರು ಖಾಸಗಿ ಕೋಚಿಂಗ್ ಸೆಂಟರಿನಲ್ಲಿ ಉಪನ್ಯಾಸಕಿಯಾಗಿದ್ದು ನಂತೂರಿನಲ್ಲಿ ಮನೆ ಹೊಂದಿದ್ದಾರೆ. ಹುಡುಗನ ತಂದೆ ಪ್ರಮೋದ್, ಬಂಟ್ಸ್ ಹಾಸ್ಟೆಲ್ ನಲ್ಲಿ ಆಟೊಮೊಬೈಲ್ ಸಂಸ್ಥೆಯನ್ನು ಹೊಂದಿದ್ದಾರೆ. ಮೃತ ಹಾರ್ದಿಕ್ ನಗರದ ಶಾರದಾ ವಿದ್ಯಾಸಂಸ್ಥೆಯಲ್ಲಿ 5ನೇ ಕ್ಲಾಸ್ ಓದುತ್ತಿದ್ದ

Leave a Response

error: Content is protected !!