

ಬೆಳ್ತಂಗಡಿ ಸೆಪ್ಟೆಂಬರ್ 12 : ಭಾಸ್ಕರ್ ನಾಯ್ಕ್ ಎಂಬವರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಅಟ್ರಾಸಿಟಿ ಕೇಸ್ ನಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಸಂಗಡಿಗರನ್ನು ಯಾಕೆ ಬಂಧಿಸಿಲ್ಲ ಎಂದು. ದಕ್ಷಿಣಕನ್ನಡ ಜಿಲ್ಲಾ ಎಸ್ಪಿಗೆ ಹೈಕೋರ್ಟ್ ನೋಟೀಸ್ ಮಾಡಿದೆ.
ಮಹೇಶ್ ಶೆಟ್ಟಿ ತಿಮರೋಡಿಯ ಮಾಜಿ ಆಪ್ತ ಬಾಸ್ಕರ್ ನಾಯ್ಕ್ ಸಪ್ಟೆಂಬರ್ 3 ರಂದು ಸಂಜೆ ಮಂಗಳೂರಿನಲ್ಲಿ ಯೂಟ್ಯೂಬ್ ಚಾನಲ್ ಗೆ ಸಂದರ್ಶನ ನೀಡಿ ವಾಪಸ್ ಬರುವಾಗ ಮಹೇಶ್ ಶೆಟ್ಟಿ ತಿಮರೋಡಿ ,ಮೋಹನ್ ಶೆಟ್ಟಿ ,ಮುಖೇಶ್ ಶೆಟ್ಟಿ,ಶೆಟ್ಟಿ,ನಿತೀನ್ @ ನೀತು, ಪ್ರಜ್ವಲ್ ಕೆವಿ ಗೌಡ, ಪ್ರಮೋದ್ ಶೆಟ್ಟಿ ಮತ್ತಿತರರು ಕಾರು ಅಡ್ಡ ಹಾಕಿ ಹಲ್ಲೆ ಮಾಡಿದ್ದರು. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಪ್ರಕರಣ ದಾಖಲಾಗಿತ್ತು.
ಮಹೇಶ್ ಶೆಟ್ಟಿ ತಿಮರೋಡಿ ಮತ್ತು ತಂಡವನ್ನು ಒಂಬತ್ತು ದಿನ ಕಳೆದರೂ ಈ ವರೆಗೆ ಆರೋಪಿಗಳನ್ನು ಪೊಲೀಸರು ಬಂಧಿಸದೆ ಸುಮ್ಮನಿದ್ದಾರೆ. ಅದಲ್ಲದೆ ಬೆಳ್ತಂಗಡಿ ಮತ್ತು ಕಟೀಲಿನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಭಾಗವಹಿಸಿದ್ದರು. ಈ ಬಗ್ಗೆ ಬಾಸ್ಕರ್ ನಾಯ್ಕ್ ಹೈಕೋರ್ಟ್ಗೆ ಸೋಮವಾರ ಮೊರೆ ಹೋಗಿದ್ದರು. ಇಂದು ಅರ್ಜಿಯನ್ನು ಪರಿಶೀಲನೆ ನಡೆಸಿದ ಹೈಕೋರ್ಟ್ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿ ತಕ್ಷಣ ಆರೋಪಿಗಳನ್ನು ಬಂಧಿಸಲು ಆದೇಶ ಹೊರಡಿಸಿದೆ. ಶೀಘ್ರವಾಗಿ ಆರೋಪಿ ತಿಮರೋಡಿ ಮತ್ತು ತಂಡವನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಬೇಕೆಂದು ಆದೇಶ ಹೊರಡಿಸಿದೆ ಎಂದು ತಿಳಿದು ಬಂದಿದೆ, ಖ್ಯಾತ ಹೈಕೋರ್ಟ್ ವಕೀಲಕರಾದ ರಾಜ್ ಶೇಖರ್ ಹಲ್ಲೆಗೊಳಾಗದ ಬಾಸ್ಕರ್ ನಾಯ್ಕ್ ಪರವಾಗಿ ವಾಧಿಸಿದರು.