

ಮಂಗಳೂರು: ಮಂಗಳೂರಿನ ಖಾಸಗಿ ಬಸ್ ನ ಮಾಲೀಕ ತಾನು ಇರುವ ಅಪಾರ್ಟ್ ಮೆಂಟ್ನಲ್ಲಿ ಆತ್ಮಹತ್ಯೆಗೆ ಶರಣಾದ ಘಟನೆ ಮಂಗಳೂರಿನ ಕದ್ರಿ ಕಂಬಳದಲ್ಲಿ ನಡೆದಿದೆ.
ಮೃತರನ್ನು ಮಹೇಶ್ ಬಸ್ ಮಾಲೀಕ ಪ್ರಕಾಶ್ ಶೆಟ್ಟಿ (40) ಎಂದು ಗುರುತಿಸಲಾಗಿದೆ. ದ.ಕ. ಮತ್ತು ಉಡುಪಿ ಜಿಲ್ಲೆಗಳ ಖಾಸಗಿ ಬಸ್ ಸೇವೆಯಲ್ಲಿ ತನ್ನದೇ ಸ್ಥಾನ ಗಿಟ್ಟಿಸಿಕೊಂಡಿದ್ದ ಮಹೇಶ್ ಬಸ್ ಸಂಸ್ಥೆಯ ಮಾಲೀಕ, ಯುವ ಉದ್ಯಮಿ ಪ್ರಕಾಶ್ ಆತ್ಮಹತ್ಯೆ…! ಸಾರ್ವಜನಿಕ ವಲಯದಲ್ಲಿ ದಿಗ್ಭ್ರಮೆ ಮೂಡಿಸಿದೆ.
ಕದ್ರಿ ಕಂಬಳ ಸಮೀಪದ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.ಆತ್ಮಹತ್ಯೆಗೆ ಕಾರಣ ಮತ್ತು ಆತ್ಮಹತ್ಯೆ ಮಾಡಿಕೊಂಡ ರೀತಿ ಇನ್ನೂ ತಿಳಿದುಬಂದಿಲ್ಲ
ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
add a comment