ರಾಜ್ಯ

ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರ ಕಚೇರಿ ಉದ್ಘಾಟನೆ.

ಮಡಿಕೇರಿ ಜೂ.9 : ಮಡಿಕೇರಿ ವಿಧಾನಸಭಾ
ಕ್ಷೇತ್ರದ ಶಾಸಕರ ಕಚೇರಿಯನ್ನು ಶಾಸಕ ಡಾ.
ಮಂತರ್ ಗೌಡ ಉದ್ಘಾಟಿಸಿದರು.
ನಗರದ ಜಿಲ್ಲಾ ಪಂಚಾಯತ್ ಆವರಣದಲ್ಲಿ
ನೂತನವಾಗಿ ಆರಂಭವಾಗಿರುವ ಕಚೇರಿಯಲ್ಲಿ
ವಿಶೇಷ ಪೂಜೆ ಸಲ್ಲಿಸಲಾಯಿತು.
ನಂತರ ಮಾತನಾಡಿದ ಮಂತರ್ ಗೌಡ, ತಮ್ಮ
ಕ್ಷೇತ್ರದ ಜನರು ತಮ್ಮ ಯಾವುದೇ ಕೆಲಸ
ಕಾರ್ಯ, ಸಮಸ್ಯೆಗಳು ಇದ್ದರೂ ಇಲ್ಲಿಗೆ ಭೇಟಿ
ನೀಡಿ ಬಗೆಹರಿಸಿಕೊಳ್ಳಬಹುದಾಗಿದೆ ಎಂದರು.ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ,
ಪ್ರಚಾರ ಸಮಿತಿ ಅಧ್ಯಕ್ಷ ಟಿ.ಪಿ.ರಮೇಶ್, ನಗರ
ಕಾಂಗ್ರೆಸ್ ಅಧ್ಯಕ್ಷ ಬಿ.ವೈ.ರಾಜೇಶ್, ಜಿಲ್ಲಾ
ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ, ಕೆಪಿಸಿಸಿ
ಸದಸ್ಯರಾದ ಮಂಜುನಾಥ್ ಗುಂಡೂರಾವ್,
ಪ್ರಮುಖರಾದ ನಂದಕುಮಾರ್, ಯಾಕೂಬ್,
ಪಕ್ಷದ ಎಸ್. ಎಂ. ಚಂಗಪ್ಪ, ಪುಲಿಯಂಡ
ಜಗದೀಶ್, ಸುಜು ತಿಮ್ಮಯ್ಯ ಸೇರಿದಂತೆ
ಮತ್ತಿರರು ಹಾಜರಿದ್ದರು.

Leave a Response

error: Content is protected !!