ರಾಜ್ಯ

ಕೆವಿಜಿ ಅಮರಜ್ಯೋತಿ ಪದವಿ ಪೂರ್ವ ಕಾಲೇಜಿಗೆ ಸತತ 6 ನೇ ಬಾರಿಗೆ ಶೇಕಡ 100 ಫಲಿತಾಂಶ .

ವಿಜ್ಞಾನ ವಿಭಾಗದಲ್ಲಿ ಪ್ರಜ್ಞಾ ಕೆ.ಸಿ 581. ವಾಣಿಜ್ಯ ವಿಭಾಗದಲ್ಲಿ ಆಯಿಶಾತ್ ಶಿಫಾನ 590 ಅಂಕ ಪಡೆದು ತಾಲೋಕಿಗೆ ಪ್ರಥಮ
ತಾಲೂಕಿನ ಅತ್ಯಂತ ಪ್ರತಿಷ್ಟಿತ ವಿದ್ಯಾಸಂಸ್ಥೆಗಳಲ್ಲಿ ಒಂದಾದ ಕೆವಿಜಿ ಅಮರಜ್ಯೋತಿ ಪದವಿ ಪೂರ್ವ
ಕಾಲೇಜು ಈ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಸತತ 6 ನೇ ಬಾರಿ ಶೇಕಡ 100 ಫಲಿತಾಂಶ ದಾಖಲಾಗಿಸಿದೆ ಎಂದು ತಿಳಿದು ಬಂದಿದೆ
ವಿಜ್ಞಾನ ವಿಭಾಗದಲ್ಲಿ ಒಟ್ಟು ವಿಜ್ಞಾನ 48 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಪ್ರಜ್ಞಾ ಕೆ.ಸಿ 581
ಅಂಕ ಗಳಿಸಿ ಪ್ರಥಮ ಸ್ಥಾನಿಯಾಗಿರುತ್ತಾರೆ ಮತ್ತು ವಾಣಿಜ್ಯ ವಿಭಾಗದಲ್ಲಿ ಒಟ್ಟು 34 ವಿದ್ಯಾರ್ಥಿಗಳು
ಪರೀಕ್ಷೆ ಬರೆದಿದ್ದು, ಆಯಿಶಾತ್ ಶಿಫಾನ 590 ಅಂಕ ಗಳಿಸಿ ಪ್ರಥಮ ಸ್ಥಾನಿಯಾಗಿರುತ್ತಾರೆ.
ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೆ ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿ ಡಾ. ರೇಣುಕಾ ಪ್ರಸಾದ್
ಕೆ. ವಿ, ಟ್ರಸ್ಟಿ ಡಾ. ಜ್ಯೋತಿ ಆರ್. ಪ್ರಸಾದ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್
ಯುಜೆ, ಪ್ರಾಂಶುಪಾಲೆ ಡಾ. ಯಶೋದ ರಾಮಚಂದ್ರ, ಉಪಪ್ರಾಂಶುಪಾಲ ದೀಪಕ್ ವೈ. ಆರ್,
ಆಡಳಿತ ಪರಿಷತ್ ಸದಸ್ಯರು ಮತ್ತು ಶಿಕ್ಷಕ ಶಿಕ್ಷಕೇತರ ವೃಂದದವರು ಅಭಿನಂದನೆ ಸಲ್ಲಿಸಿರುತ್ತಾರೆ

Leave a Response

error: Content is protected !!