

ಸಂಪಾಜೆ ಗ್ರಾಮದ ಕಡೆಪಾಲ ನಿವಾಸಿ ಅಹಮ್ಮದ್ ಮಶೂದ್ ಕಾನಕ್ಕೋಡ್ ರವರು ಕಳೆದ ಎರಡು ವರ್ಷಗಳಿಂದ ಬೆಳೆಸಿದ ತನ್ನ ತಲೆ ಕೂದಲನ್ನು ರೆಡ್ ಇಸ್ ಬ್ಲಡ್ ಕೇರಳ ಚಾರಿಟೇಬಲ್ ಟ್ರಸ್ಟ್ ಮೂಲಕ ಕ್ಯಾನ್ಸರ್ ರೋಗಿಗಳಿಗೆ ದಾನವಾಗಿ ನೀಡಿ ಮಾನವೀಯತೆ ಮೆರೆದಿದ್ದಾರೆ.
ಇವರು ಸಂಪಾಜೆ ಕಡೆಪಾಲದ ಕಾನಕ್ಕೋಡ್ ಮಹಮ್ಮದ್ ಮತ್ತು ಸಾರ ದಂಪತಿಗಳ ಪುತ್ರ, ಸಾಮಾಜಿಕ ಕಾರ್ಯಕರ್ತ ಫಾರೂಕ್ ಕಾನಕ್ಕೋಡ್ ರವರ ಸಹೋದರ.
add a comment