ರಾಜ್ಯ

ಚಿರತೆ ಹಿಡಿಯಲು ಇಟ್ಟಿದ್ದ ಕೋಳಿ ಕದಿಯಲು ಹೋಗಿ ಸಿಕ್ಕಿ ಬಿದ್ದ ಆಸಾಮಿ…!!

ಲಕ್ನೋ ಫೆಬ್ರವರಿ 25: ಚಿರತೆ ಹಿಡಿಯಲು ಇಟ್ಟಿದ್ದ ಕೋಳಿ ಕದಿಯಲು ಹೋಗಿ ವ್ಯಕ್ತಿಯೊಬ್ಬ ಚಿರತೆ ಬೋನಿನಲ್ಲಿ ಸಿಕ್ಕಿ ಬಿದ್ದ ಘಟನೆ ಉತ್ತರ ಪ್ರದೇಶದ ಬುಲಂದ್‍ಶಹರ್‌ನಲ್ಲಿ ನಡೆದಿದೆ.
ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಹಿಡಿಲು ಬೋನಿನೊಳಗೆ ಕೋಳಿಯೊಂದನ್ನು ಇಟ್ಟಿದ್ದರು, ಇದನ್ನು ನೋಡಿದ ವ್ಯಕ್ತಿಯೊಬ್ಬ ಸೀದಾ ಬೋನಿನೊಳಗೆ ಹೋಗಿ ಕೋಳಿ ಕದಿಯಲು ಪ್ರಯತ್ನಿಸಿದ್ದಾನೆ. ಆದರೆ ಅಷ್ಟರಲ್ಲೇ ಬೋನಿನ ಬಾಗಿಲು ಬಂದ್ ಆಗಿ ಬೋನಿನಲ್ಲಿ ಸಿಲುಕಿದ್ದಾನೆ. ಅರಣ್ಯ ಇಲಾಖೆಯ ಸಿಬ್ಬಂದಿ ಬೋನ್ ಇರಿಸಿದ್ದ ಜಾಗಕ್ಕೆ ತೆರಳಿದಾಗ ಒಳಗೆ ಸಿಲುಕಿದ್ದ ವ್ಯಕ್ತಿಯನ್ನು ನೋಡಿ ಅಚ್ಚರಿಗೊಂಡಿದ್ದಾರೆ. ಬೋನಿನಲ್ಲಿ ಸೆರೆಯಾದ ವ್ಯಕ್ತಿಯ ವೀಡಿಯೋ ವೈರಲ್ ಆಗಿದೆ. ಬೋನಿನ ಸರಳುಗಳನ್ನು ಹಿಡಿದುಕೊಂಡು ರಕ್ಷಿಸುವಂತೆ ಕೂಗಿಕೊಳ್ಳುತ್ತಿರುವ ದೃಶ್ಯದ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆತನನ್ನ ತಕ್ಷಣ ಬಿಡುಗಡೆ ಮಾಡಲಾಗಿದೆ .

Leave a Response

error: Content is protected !!