ರಾಜ್ಯ

ಮೇ.16,17 ಮತ್ತು 18 ರಂದು ಕೋಲ್ಚಾರು ಕುಟುಂಬಸ್ಥರ ತರವಾಡು ಮನೆತನದ ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ.

ಕಂಗೊಳಿಸುತ್ತಿರುವ ಕೋಲ್ಚಾರು ಭಾರೀ ಸಿದ್ದತೆಗಳೊಂದಿಗೆ ಭಕ್ತಾದಿಗಳನ್ನು ದೈವಕಟ್ಟು ಮಹೋತ್ಸವ ವೀಕ್ಷಣೆ ಮಾಡಲು ಕೈ ಬೀಸಿ ಕರೆಯುವಂತಿದೆ.

ಮೇ.16,17 ಮತ್ತು 18 ರಂದು ಸುಳ್ಯ ತಾಲೋಕಿನ
ಆಲೆಟ್ಟಿ ಗ್ರಾಮದ ಕೋಲ್ಚಾರು ಕುಟುಂಬಸ್ಥರ ತರವಾಡು ಮನೆತನದ ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವವು ಬಾರೀ ವಿಜ್ರಂಭಣೆಯಿಂದ ನಡೆಯಲಿದ್ದು ಸುಮಾರು 40000 ಕ್ಕೂ ಮಿಕ್ಕಿ ಭಕ್ತಾಧಿಗಳು ವಿವಿದ ಕಡೆಗಳಿಂದ ಆಗಮಿಸಲಿದ್ದು ಇದರ ಪೂರ್ವಬಾವಿ
ಸಿದ್ಧತಾ ಕಾರ್ಯವು ಬಹುಪಾಲು ಪೂರ್ಣಗೊಂಡಿದೆ ಎಂದು ಪುರುಷೋತ್ತಮ ಕೋಲ್ಚಾರು ತಿಳಿಸಿದ್ದಾರೆ ಅವರು ಇಂದು ನ್ಯೂಸ್ ರೂಮಾ ಫಸ್ಟ್ ಮಾದ್ಯಮ ಸಂದರ್ಶನದಲ್ಲಿ ಈ ಬಗ್ಗೆ ವಿವರ ತಿಳಿಸಿದ್ದಾರೆ .ಮೇ.16 ರ ನಾಳೆ ಬೆಳಿಗ್ಗೆ ಗಂಟೆ 8.30 ರಿಂದ ಕೋಲ್ಟಾರು ಐನ್ ಮನೆಯಿಂದ ಮತ್ತು ಶ್ರೀ ಶಾರದಾಂಬಾ ಭಜನಾ ಮಂದಿರದ ಬಳಿಯಿಂದ ಹಸಿರುವಾಣಿ ಮೆರವಣಿಗೆಯು
ಸಾಗಿ ಬರಲಿದ್ದು ಬಳಿಕ ಉಗ್ರಾಣ ತುಂಬುವ ಕಾರ್ಯಕ್ರಮ ನಡೆದು ಧಾರ್ಮಿಕ ಸಭೆಯು ನಡೆಯಲಿದೆ. ಬೆಂಗಳೂರು ಚೆನ್ನೇನಹಳ್ಳಿ
ಜನಸೇವಾ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ
ಎ.ಎಸ್.ನಿರ್ಮಲ ಕುಮಾರ್ ರವರು ಉಪನ್ಯಾಸ
ನೀಡಲಿದ್ದಾರೆ. ಮತ್ತು ಅದೇ ದಿನ ರಾತ್ರಿ ಕೈವೀದು ನಡೆಯಲಿದೆ .ಮೇ.17 ರಂದು ಸಂಜೆ ತರವಾಡು ದೈವಸ್ಥಾನದಿಂದ ಭಂಡಾರ ಆಗಮಿಸಿ ಬಳಿಕ ಶ್ರೀ ಕಾರ್ನೋನ್ ದೈವದ ವೆಳ್ಳಾಟಂ ಶ್ರೀ ಕೋರಚ್ಚನ್ ದೈವದ ವೆಳ್ಳಾಟಂ, ಶ್ರೀ ಕಂಡನಾರ್ ಕೇಳನ್ ದೈವದ ವೆಳ್ಳಾಟಂ, ರಾತ್ರಿ ಶ್ರೀ ವಿಷ್ಣುಮೂರ್ತಿ ದೈವದ ತೊಡಂಞಲ್, ಬಳಿಕ ಶ್ರೀ ವಯನಾಟ್ ಕುಲವನ್ ದೈವದ ವೆಳ್ಳಾಟಂ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.


ಮೇ18 ಬೆಳಗ್ಗೆ ಗಂಟೆ 7.00 ರಿಂದ ಶ್ರೀ ಕಾರ್ನೋನ್
ದೈವ ನಡೆದು ಶ್ರೀ ಕೋರಚ್ಚನ್ ದೈವವಾಗಿ ಶ್ರೀ ಕಂಡನಾರ್ ಕೇಳನ್ ದೈವ ನಡೆಯಲಿದೆ.ಅಪರಾಹ್ನ ಗಂಟೆ 3.00 ರಿಂದ ಶ್ರೀ ವಯನಾಟ್ ಕುಲವನ್ ದೈವದ ಅಂಗಣ ಪ್ರವೇಶವಾಗಿ ಸೂಟೆ ಸಮರ್ಪಣೆ ನಡೆಯಲಿರುವುದು.

ಅಪರಾಹ್ನ ಗಂಟೆ 4.00 ರಿಂದ ಶ್ರೀ ವಿಷ್ಣುಮೂರ್ತಿ ದೈವದ ಅಂಗಣ ಪ್ರವೇಶ ವಾಗಿ ಮರ ಪಿಳರ್ಕಲ್ ನಡೆದ ಬಳಿಕ ದೈವಸ್ಥಾನದಲ್ಲಿ ಕೈವೀದು ನಡೆಯಲಿದೆ ಈ ಮೂರು ದಿವಸಗಳು ಕ್ಷೇತ್ರದಲ್ಲಿ ಭಕ್ತಾಧಿಗಳಿಗೆ ನಿರಂತರ ಊಟ ಮತ್ತು ಉಪಹಾರ ಪ್ರಸಾಧ ಬೋಜನ ನೀಡಲಾಗುತ್ತದೆ.

ಮೇ.16,17 ಮತ್ತು 18 ರಂದು ಕೋಲ್ಚಾರು ಕುಟುಂಬಸ್ಥರ ತರವಾಡು ಮನೆತನದ ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ.

ಸುಳ್ಯ ದಿಂದ ಆಲೆಟ್ಟಿ ಮಾರ್ಗವಾಗಿ ನಾರ್ಕೂಡಿಗಾಗಿ ಕೋಲ್ಚಾರು ಸಂಪರ್ಕಿಸುವ ರಸ್ತೆಯಾದ್ಯಂತ ಅಲ್ಲಲ್ಲಿ ಪ್ಲೆಕ್ಸ್ ಗಳನ್ನು ಅಳವಡಿಸಲಾಗಿದ್ದು, ದೈವಸ್ಥಾನಕ್ಕೆ ಹತ್ತಿರ ಬರುತ್ತಿದ್ದಂತೆ ಹಸಿರ ನಡುವೆ ಕೇಸರಿ ತೋರಣಗಳು ಭಕ್ತಾಧಿಗಳನ್ನು ಕರೆಯುತ್ತಿದೆ ಅಲಂಕೃತ ವಿದ್ಯುತ್ ದೀಪಗಳು ಮಿಂಚುಗಳ ಲೋಕವನ್ನೇ ಸೃಷ್ಠಿ ಮಾಡುತ್ತಿದೆ . ದೈವ ಸ್ಥಾನದ ತದ್ರೂಪು ರೀತಿಯಲ್ಲಿ ಆಕರ್ಷಕವಾಗಿ ಸಿದ್ದಗೊಂಡಿರುವ ಪ್ರವೇಶ ದ್ವಾರ ಕೋಲ್ಚಾರು ಕುಟುಂಬಸ್ಥರ ಕಲಾತ್ಮಕ ಮನಸ್ಸುಗಳನ್ನು ಪ್ರತಿಬಿಂಬಿಸುತ್ತಿದೆ, ಇರುವ ಜಾಗವನ್ನೇ ಬಳಸಿಕೊಂಡು ಅಚ್ಚುಕಟ್ಟಾದ ಗ್ಯಾಲರಿಗಳನ್ನು ನಿರ್ಮಿಸಲಾಗಿದೆ,ಭಕ್ತಾದಿಗಳ ವಾಹನ ಪಾರ್ಕಿಂಗ್ ಪ್ರತ್ಯೇಕ ಸ್ಥಳವನ್ನು ಸಿದ್ದಪಡಿಸಲಾಗಿದೆ. ಸಾವಿರಾರು ಮಂದಿ ಭಕ್ತಾದಿಗಳು ಏಕಕಾಲದಲ್ಲಿ ಊಟ ಉಪಹಾರ ಸೇವಿಸ ಬಲ್ಲ ಬೃಹತ್ ಪ್ರಾಂಗಣ ನಿರ್ಮಿಸಲಾಗಿದ್ದು, 6 ಕೌಂಟರ್ ಗಳ ಮೂಲಕ ನಿರಂತರ ಅನ್ನದಾಸೋಹಕ್ಕೆ ವ್ಯವಸ್ಥೆ ಮಾಡಲಾಗಿದೆ, ಎಲ್ ಸಿ ಡಿ ಪರದೆಗಳ ಮೂಲಕ ದೈವಂಕಟ್ಟು ಮಹೋತ್ಸವನ್ನು ಕಣ್ತುಂಬಿಕೊಳ್ಳಲು ವ್ಯವಸ್ಥೆಯನ್ನು ಮಾಡಲಾಗಿದೆ. ಇನ್ನು ಕಳೆದ ಒಂದೆರಡು ತಿಂಗಳಿಂದ ನಿರಂತರ ಶ್ರಮದಾನ ನಡೆಸುತ್ತಿರುವ ಕೋಲ್ಚಾರು ಕುಟುಂಬಸ್ಥರಿಗೆ ಹೆಗಲಿಗೆ ಹೆಗಲು ಕೊಟ್ಟು ಸಹಕಾರ ಮಾಡುತ್ತಿದ್ದಾರೆ ಸ್ಥಳಿಯ ವಿವಿಧ ಕುಟುಂಭಸ್ಥರು , ಒಟ್ಟಿನಲ್ಲಿ ಭಾರೀ ಸಿದ್ದತೆಗಳು ಅಲಂಕಾರಗಳು ಭಕ್ತಾದಿಗಳನ್ನು ದೈವಕಟ್ಟು ಮಹೋತ್ಸವ ವೀಕ್ಷಣೆ ಮಾಡಲು ಕೈ ಬೀಸಿ ಕರೆಯುವಂತಿದೆ.

Leave a Response

error: Content is protected !!