

ಸುಳ್ಯ ಬೆಳ್ಳಾರೆ ಠಾಣಾ ವ್ಯಾಪ್ತಿಯ ಕೊಡಿಯಾಲ ಗ್ರಾಮದ ಮೂವಪೆ ಅಂಗನವಾಡಿ ಕೇಂದ್ರದ ಹೆಂಚು ಸರಿಸಿ ಒಳ ನುಗ್ಗಿರುವ ಕಳ್ಳರು ಆಹಾರ ಸಾಮಾಗ್ರಿ ಕಳವು ಮಾಡಿರುವ ಬಗ್ಗೆ ತಿಳಿದು ಬಂದಿದ್ದು, ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ . ಅಂಗನವಾಡಿ ಕಾರ್ಯಕರ್ತೆ ಮೋಹಿನಿ ಎಂಬವರು ಈ ಬಗ್ಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ, ಅ.೧೯ ರ ರಾತ್ರಿ ಅಂಗನವಾಡಿಗೆ ನುಗ್ಗಿರುವ ಕಳ್ಳರು ದಾಸ್ತಾನಿರಿಸಿದ್ದ ಒಟ್ಟು 9690 ರೂ ಮೌಲ್ಯದ ಆಹಾರ ಸಾಮಾಗ್ರಿಗಳನ್ನು ಕದ್ದೊಯ್ದಿರುವುದಾಗಿ ತಿಳಿದು ಬಂದಿದೆ, ಈ ಬಗ್ಗೆ ಬೆಳ್ಳಾರೆ ಪೋಲಿಸರು ತನಿಖೆ ನಡೆಸುತ್ತಿದ್ದಾರೆ.
add a comment