ನಗರದ ಕಸ ಕಲ್ಚೆರ್ಪೆಯಲ್ಲಿ ಅಡ್ಡಾ ದಿಡ್ಡಿ ಡಂಪಿಂಗ್ :
ಕಸ ಸಾಗಾಟದ ವಾಹನದ ಕೀ ಸೆಳೆದು ವಾಹನಕ್ಕೆ ತಡೆ ಮಾಡಿದ ಸ್ಥಳಿಯರು: ಆಲೆಟ್ಟಿ ಪಂಚಾಯತ್ ಸದಸ್ಯ ಸುದೇಶ್ ನೇತ್ರತ್ವದಲ್ಲಿ ಕಾರ್ಯಾಚರಣೆ.


ಸುಳ್ಯ ನಗರದ ಕಸ ಇದೀಗ ಮತ್ತೆ ಕಲ್ಚೆರ್ಪೆಯಲ್ಲಿ ಅಡ್ಡಾ ದಿಡ್ಡಿ ಡಂಪಿಂಗ್ ಮಾಡಲಾಗುತ್ತಿದೆ ಎಂದು ಸ್ಥಳೀಯರು ವಿರೋಧ ವ್ಯಕ್ತ ಪಡಿಸಿದ್ದು. ಸ್ಥಳೀಯರು ಆಕ್ರೋಶಭರಿತರಾಗಿ ಕಸ ಸಾಗಾಟದ ವಾಹನದ ಕೀ ಸೆಳೆದು ವಾಹನಕ್ಕೆ ತಡೆ ಮಾಡಿದ್ದು ಪ್ರತಿಭಟನೆಗೆ ಮುಂದಾಗಿದ್ದಾರೆ.

ಸುಳ್ಯ ನಗರದ ಕಸವನ್ನು ಹಲವು ವರ್ಷಗಳಿಂದ ಕಲ್ಚರ್ಪೆಯಲ್ಲಿ ತಂದು ಹಾಕಲಾಗುತಿತ್ತು. ಬಳಿಕ ಅಲ್ಲಿ ಜಾಗವಿಲ್ಲದೆ ನಗರ ಪಂಚಾಯತ್ ಆವರಣವನ್ನೇ ಡಂಪಿಂಗ್ ಏರಿಯವನ್ನಾಗಿ ಮಾಡಲಾಗಿತ್ತು. ಇದಕ್ಕೆ ಸಾಕಷ್ಟು ಆಕ್ಷೇಪ ವ್ಯಕ್ತ ಪಡಿಸಿದ್ದರಿಂದ ಬಳಿಕ ನಗರ ಪಂಚಾಯತ್ ಇತ್ತೀಚೆಗೆ ಕಸವನ್ನು ಸಾಗಾಟ ಮಾಡಿ ನಗರ ಪಂಚಾಯತ್ ಆವರಣ ಸ್ವಚ್ಚ ಮಾಡಿಕೊಂಡಿದ್ದು ನಗರದ ಕಸವನ್ನು ಕಲ್ಚೆರ್ಪೆಯಲ್ಲಿ ಬರ್ನಿಂಗ್ ಮೆಷಿನ್ ಮೂಲಕ ಬರ್ನ್ ಮಾಡಲು ಯೋಜನೆ ರೂಪಿಸಲಾಗಿತ್ತು. ಇದರಿಂದಾಗಿ ಕಸದ ಸಮಸ್ಯೆ ಒಂದಷ್ಟು ಕಡಿಮೆಯಾಗಿ ಕಲ್ಚೆರ್ಪೆಯ ಜನರು ಕೂಡಾ ನಿಟ್ಟುಸಿರು ಬಿಡುವಂತಾಗಿತ್ತು.
ಆದರೆ ಕಳೆದ ಕೆಲ ದಿನಗಳಿಂದ ಕಲ್ಚೆರ್ಪೆಯಲ್ಲಿ ವಿಪರೀತ ಸೊಳ್ಳೆಗಳ ಕಾಟ ಹೆಚ್ಚಾಗಿತ್ತು. ಯಾವತ್ತೂ ಈ ರೀತಿ ಇಲ್ಲದ ಸೊಳ್ಳೆಗಳು ಕೆಲ ದಿನಗಳಿಂದ ವ್ಯಾಪಕವಾಗಿದ್ದುದನ್ನು ಕಂಡು ಪರಿಸರದ ಜನರು ಚಿಂತೆಗೊಳಗಾದಾಗ ಕಲ್ಚೆರ್ಪೆಯಲ್ಲಿ ಫಾರೆಸ್ಟ್ ಜಾಗದ ಒಳಗೆ ಕಸದ ರಾಶಿ ಪತ್ತೆಯಾಯಿತು. ಇದೀಗ ಆ ಕಸದ ರಾಶಿ ಹೆಚ್ಚುತ್ತಿದೆ. ಈ ಬಗ್ಗೆ ಸ್ಥಳೀಯರು ಕಲಚೆರ್ಪೆಯಲ್ಲಿ ವಾಹನಕ್ಕೆ ತಡೆ ಮಾಡಿದ್ದಾರೆ.

“ಕಲ್ಚೆರ್ಪೆಯಲ್ಲಿ ಕಸ ಹಾಕುವುದಿಲ್ಲ ಎಂದು ನ.ಪಂ.ಅಧಿಕಾರಿಗಳು ಇತ್ತೀಚೆಗೆ ಹೇಳಿದ್ದರು. ಇದೀಗ ಮತ್ತೆ ಇಲ್ಲಿ ಕಸ ಅಡ್ಡಾದಿಡ್ಡಿ ಎಲ್ಲೆಂದರಲ್ಲಿ ಡಂಪಿಂಗ್ ಮಾಡುತ್ತಿದ್ದು ಇದರಿಂದ ಸಮಸ್ಯೆ ಎದುರಾಗಿದೆ ಎಂದು ಗ್ರಾಮ ಪಂಚಾಯತ್ ಸದಸ್ಯ ಸುದೇಶ್ ನ್ಯೂಸ್ ರೂಮ್ ಗೆ ತಿಳಿಸಿದ್ದಾರೆ.
