ರಾಜ್ಯ

ಸುಳ್ಯ ನಗರ ಪಂಚಾಯತ್ ಮಾಜಿ ಸದಸ್ಯ, ಹಿಂದೆ ಸುಳ್ಯದಲ್ಲಿ ತತ್ವಮಸಿ ಚಾರಿಟೇಬಲ್ ಟ್ರಸ್ಟ್ ಪಾಲುದಾರರಾಗಿದ್ದ : ಕೆ ಪಿ ಶಿವಪ್ರಕಾಶ್ ನಿಧನ.

ಸುಳ್ಯ ನಗರ ಪಂಚಾಯತ್ ಮಾಜಿ ಸದಸ್ಯ , ಕೆಲ ವರ್ಷಗಳ ಹಿಂದೆ ಸುಳ್ಯದಲ್ಲಿ ತತ್ವಮಸಿ ಚಾರಿಟೇಬಲ್ ಟ್ಟಸ್ಟ್ ನ ಪಾಲುದಾರರಾಗಿದ್ದ. ಕೆ.ಪಿ.ಶಿವಪ್ರಕಾಶ್
ರವರು ಇಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಅವರಿಗೆ ಸುಮಾರು 58 ವರ್ಷ ವಯಸ್ಸಾಗಿತ್ತು.
ಇತ್ತೀಚಿನ ಕೆಲ ಸಮಯದಿಂದ ಪುತ್ತೂರಿನಲ್ಲಿ ಬಾಡಿಗೆ
ಮನೆಯಲ್ಲಿ ನೆಲೆಸಿದ್ದರು. ಕಳೆದ ಸೋಮವಾರ
ಮನೆಯಲ್ಲಿರುವಾಗ ಅವರಿಗೆ ಬ್ರೈನ್ ಹ್ಯಾಮರೇಜ್
ಆಯಿತೆನ್ನಲಾಗಿದೆ. ಕೂಡಲೇ ಅವರನ್ನು ಮಹಾವೀರ ಆಸ್ಪತ್ರೆಗೆ ಕರೆದೊಯ್ದು ಅಲ್ಲಿಂದ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಇಂದು ಮಧ್ಯಾಹ್ನ ಅವರು ಕೊನೆಯುಸಿರೆಳೆದರು.ಮೃತದೇಹದ ಅಂತ್ಯಕ್ರಿಯೆ ಪುತ್ತೂರಿನ ಸ್ಮಶಾನದಲ್ಲಿ ನಡೆಯಿತು. ಮೃತರು ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.
ಅವರು ಸುಳ್ಯದಲ್ಲಿ ಐದು ವರ್ಷಗಳ ಹಿಂದೆ ತತ್ವಮಸಿ ಚಾರಿಟೇಬಲ್ ನಡೆಸುತ್ತಿದ್ದು, ಅದರ ಪಾಲುದಾರರಾಗಿ ಹಿಂದೆ ಸುಳ್ಯದಲ್ಲಿ ಟಿ ವಿ ಎಸ್ ಬೈಕ್ ಶೂರೂಂ , ಇಲೆಕ್ಟ್ರಾನಿಕ್ ಶೂರೂಂಗಳನ್ನು ನಡೆಸಿ ಸುಳ್ಯದಲ್ಲಿ ಉದ್ಯಮಿ ಯಾಗಿ ಗುರುತಿಸಿಕೊಂಡಿದ್ದು ,ನೂರಾರು ಕಡೆಗಳಲ್ಲಿ ಟ್ರಸ್ಟ್ ಮುಖೇನ ವಿವಿಧ ಸಾಮಾಗ್ರಿಗಳನ್ನು ದಾನವಾಗಿ ನೀಡಿದ್ದರು , ಆದರೆ ವ್ಯವಾಹಾರದಲ್ಲಿ ಧಿಡೀರ್ ಕುಸಿತ ಕಂಡು ಸಂಸ್ಥೆ ನಡೆಸಲಾಗದೆ, ಪಾಲುದಾರಿಕೆಯಲ್ಲಿ ಒಡಕು ಮೂಡಿ, ಊರು ತೊರೆದಿದ್ದರು, ನಂತರ ಇತ್ತಿಚಿಗೆ
ಪುತ್ತೂರಿನಲ್ಲಿ ವಾಸಮಾಡುತ್ತಿದ್ದರು.

Leave a Response

error: Content is protected !!