

ಚಿತ್ರ ಕಲಾವಿದ ಪೆರುವಾಜೆಯ ಜಿತೇಶ್ ರಚಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಪೆನ್ಸಿಲ್ ಆರ್ಟ್ ಚಿತ್ರವನ್ನು ಹೊಸ ವರ್ಷದ ದಿನ ಹೆಗ್ಗಡೆಯವರಿಗೆ ಹಸ್ತಾoತರಿಸಿದರು. ಪೆನ್ಸಿಲ್ ಆರ್ಟ್ ಚಿತ್ರವನ್ನು ವೀಕ್ಷಿಸಿ ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತಪಡಿಸಿ ಜಿತೇಶ್ ಅವರನ್ನು ಅಭಿನಂದಿಸಿ ಶುಭ ಹಾರೈಸಿದರು. ಜಿತೇಶ್ ರವರ ತಂದೆ ಸುರೇಶ್ ಕುಮಾರ್ ಪೆರುವಾಜೆ, ತಾಯಿ ಸುಮಾ ಪೆರುವಾಜೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಾಣಿಜ್ಯ (ಗಣಕ ವಿಜ್ಞಾನ) ವಿಭಾಗದ ವಿದ್ಯಾರ್ಥಿಯಾಗಿರುವ ಜಿತೇಶ್ ಹವ್ಯಾಸಿ ಚಿತ್ರಕಲಾವಿದರಾಗಿದ್ದು, ಇವರು ರಚಿಸಿರುವ ಚಿತ್ರ ನಟ ದಿ. ಪುನೀತ್ ರಾಜ್ ಕುಮಾರ್ ಸೇರಿದಂತೆ ಹಲವು ಗಣ್ಯರ ಪೆನ್ಸಿಲ್ ಆರ್ಟ್ ಗಮನಸೆಳೆಯುತ್ತಿವೆ.


add a comment