ರಾಜ್ಯ

ಇಸ್ರೋ ಐತಿಹಾಸಿಕ ಸಾಧನೆ : ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದ ‘ವಿಕ್ರಮ್ ಲ್ಯಾಂಡರ್’

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿಗಳು ಕಳೆದ ಜುಲೈ 14 ರಂದು ಉಡಾವಣೆ ಮಾಡಿದ್ದ ಚಂದ್ರಯಾನ-3 ನೌಕೆಯ ‘ವಿಕ್ರಮ್ ಲ್ಯಾಂಡರ್’ ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದಿದೆ.
ಆ ಮೂಲಕ ಕೋಟ್ಯಂತರ ಭಾರತೀಯರ ಪ್ರಾರ್ಥನೆ ಫಲಿಸಿದೆ. ಈ ಐತಿಹಾಸಿಕ ಕ್ಷಣಕ್ಕೆ ಇಡೀ ವಿಶ್ವವೇ ಸಾಕ್ಷಿಯಾಯಿತು.
ಸಂಜೆ 06:03ಕ್ಕೆ ‘ವಿಕ್ರಮ್ ಲ್ಯಾಂಡರ್’ ಅನ್ನು ಯಶಸ್ವಿಯಾಗಿ ಚಂದ್ರನ ಮೇಲೆ ಇಳಿಸಲಾಯಿತು.
ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅಲ್ಲಿಂದಲೇ ಈ ಪ್ರಕ್ರಿಯೆಯನ್ನು ವರ್ಚುವಲ್ ಮೂಲಕ ವೀಕ್ಷಿಸಿದರು.

Leave a Response

error: Content is protected !!