ಹಿಂದೂ ಅಪ್ರಾಪ್ತ ಬಾಲಕಿಯೊಂದಿಗಿದ್ದ ಮುಸ್ಲಿಂ ಯುವಕನಿಗೆ ಥಳಿತ:ಬಾಲಕಿ ಮನೆಯವರಿಂದ ಯುವಕನ ವಿರುದ್ದ ದೂರು.ಯುವಕ ಆಸ್ಪತ್ರೆಗೆ ದಾಖಲು, ಹಲ್ಲೆಗೈದವರ ಮೇಲೆ ಪ್ರತಿದೂರು .


ವಿದ್ಯಾರ್ಥಿನಿಯಾಗಿರುವ ಹಿಂದೂ ಅಪ್ರಾಪ್ತ ಬಾಲಕಿಯೊಂದಿಗೆ ಇದ್ದ ಮುಸ್ಲಿಂ ಯುವಕನಿಗೆ ಥಳಿಸಿದ ಘಟನೆ ಸುಬ್ರಹ್ಮಣ್ಯದಲ್ಲಿ ನಡೆದಿದ್ದು, ಈ ಬಗ್ಗೆ ಬಾಲಕಿ ಮನೆಯವರು ಯುವಕನ ವಿರುದ್ದ ದೂರುದಾಖಲಿಸಿದ್ದು.ತೀವ್ರ ಹಲ್ಲೆಗೊಳಗಾದ ಯುವಕ ಆಸ್ಪತ್ರೆಗೆ ದಾಖಲಾಗಿ ಪ್ರತಿದೂರು ನೀಡಿದ್ದು, ಪೋಲೀಸರು ಇದೀಗ ಯುವಕನ ವಿರುದ್ದ ಮತ್ತು ಹಲ್ಲೆ ಮಾಡಿದ ಯುವಕರ ವಿರುದ್ದ ದೂರು ದಾಖಲಿಸಿದ್ದಾರೆ.
ಇನ್ಸಟಾಂ ಗ್ರಾಮ್ ಮೂಲಕ ಪರಸ್ಪರ ಪರಿಚಯವಾದ ಯುವತಿಯನ್ನು ಬೇಟಿಯಾಗಲು ಕಲ್ಲುಗುಂಡಿಯ ಯುವಕ ಸುಬ್ರಹ್ಮಣ್ಯ ಸುರಕ್ಷಿತ ಪ್ರದೇಶ ಎಂದು ತೆರಳಿದ್ದಾನೆ ಅಲ್ಲಿ ಅವರು ಇಬ್ಬರು ಪ್ರತ್ಯೇಕವಾಗಿ ಕಂಡು ಬಂದ ಹಿನ್ನಲೆಯಲ್ಲಿ ಯುವಕನ ವರ್ತನೆ ನೋಡಿ ಸಂಶಯಗೊಂಡು ಸ್ಥಳಿಯ ಯುವಕರು ವಿಚಾರಿಸಿದಾಗ ಸರಿಯಾದ ಉತ್ತರ ಬಾರದ ಹಿನ್ನಲೆಯಲ್ಲಿ ಹಲ್ಲೆ ನಡೆಸಲಾಗಿದೆ ಎಂದು ಹೇಳಲಾಗಿದೆ,ಯುವಕ ತನ್ನ ವಿವರ ಹೇಳಿದ ಮೇಲೆ ಯುವಕನಿಗೆ ಮತ್ತೆ ಥಳಿಸಿದ್ದಾರೆ.ಹಲ್ಲೆಗೊಳಗಾದ ಯುವಕ ಕಲ್ಲುಗುಂಡಿಯ ಅಫೀದ್ ಎಂದು ತಿಳಿದು ಬಂದಿದ್ದು, ಪೆಟ್ಟು ತಿಂದ ಯುವಕ ಸುಳ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.