ರಾಜ್ಯ

ಹನುಮಗಿರಿಯಲ್ಲಿ ಅಮರಗಿರಿ ಭಾರತ್ ಸೇವಾ
ಮಂದಿರವನ್ನು ಲೋಕಾರ್ಪಣೆಗೊಳಿಸಿದ ಕೇಂದ್ರ ಗೃಹಸಚಿವ ಅಮಿತ್ ಶಾ .

ಪುತ್ತೂರು: ಶ್ರೀ ಕ್ಷೇತ್ರ ಹನುಮಗಿರಿಯಲ್ಲಿ ನೂತನವಾಗಿ
ನಿರ್ಮಾಣಗೊಂಡಿರುವ ಅಮರಗಿರಿ ಭಾರತ್ ಸೇವಾ
ಮಂದಿರವನ್ನು ಕೇಂದ್ರ ಗೃಹಸಚಿವ ಅಮಿತ್ ಶಾರವರು
ಲೋಕಾರ್ಪಣೆಗೊಳಿಸಿದರು. ಕೇರಳದ ಕಣ್ಣೂರಿನಿಂದ
ಹೆಲಿಕಾಪ್ಟರ್‌ನಲ್ಲಿ ಬಂದು ಹನುಮಗಿರಿ ಗಜಾನನ
ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿನ ಹೆಲಿಪ್ಯಾಡ್‌ನಲ್ಲಿ
ಬಂದಿಳಿದ ಅಮಿತ್ ಶಾ ಅವರಿಗೆ ಅಭೂತಪೂರ್ವ ಗೌರವ ನೀಡಲಾಯಿತು. ಬಳಿಕ ಹನುಮಗಿರಿ ಕ್ಷೇತ್ರದ ಪಂಚಮುಖಿ ಆಂಜನೇಯ ದೇವರ ದರುಶನ ಪಡೆದ ಅಮಿತ್ ಶಾರವರು ಅಮರಗಿರಿಯನ್ನು ಲೋಕಾರ್ಪಣೆ ಗೊಳಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ದ.ಕ ಸಂಸದ, ರಾಜ್ಯ ಬಿಜೆಪಿ ಅಧ್ಯಕ್ಷರೂ ಆಗಿರುವ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಶ್ರೀ ಕ್ಷೇತ್ರದ ವತಿಯಿಂದ ಅಮಿತ್ ಶಾ ಅವರಿಗೆ ಗೌರವಾರ್ಪಣೆ ನಡೆಯಿತು.


ಶ್ರೀ ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ
ಮೂಡೆತ್ತಾಯ, ಕೇಂದ್ರ ಸರಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಮ್ ನಟರಾಜ್ ಮತ್ತಿತರರು ಅಮಿತ್ ಶಾ ಮತ್ತಿತರ ಗಣ್ಯರನ್ನು ಸ್ವಾಗತಿಸಿದರು. ಮಹೇಶ್ ಕಜೆ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು.

Leave a Response

error: Content is protected !!