ರಾಜ್ಯ

ಹಮಾಸ್ ಉಗ್ರರನ್ನ ದೇಶಪ್ರೇಮಿ ಅಂದ ಮಂಗಳೂರಿನ ಝಾಕಿರ್ ವಿರುದ್ದ ದೇಶದ್ರೋಹ ಪ್ರಕರಣ ದಾಖಲಿಸಲು ದೂರು.

ಮಂಗಳೂರು ಅಕ್ಟೋಬರ್ 14: ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಯುದ್ದ ನಡುವೆ ಮಂಗಳೂರಿನಲ್ಲಿ ವ್ಯಕ್ತಿಯೊಬ್ಬ ಹಮಾಸ್ ಉಗ್ರರನ್ನು ಬೆಂಬಲಿಸಿ ವಿಡಿಯೋ ಪೋಸ್ಟ್ ಮಾಡಿದ್ದು, ಇದೀಗ ಆ ವ್ಯಕ್ತಿ ವಿರುದ್ದ ದೇಶದ್ರೋಹ ಪ್ರಕರಣ ದಾಖಲಿಸಲು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಉಗ್ರ ಸಂಘಟನೆ ಹಮಾಸ್ ಪರ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟ ಝಾಕಿರ್ ವಿರುದ್ದ ಬಂದರು ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ವಿಡಿಯೋದಲ್ಲಿರುವ ವ್ಯಕ್ತಿಯನ್ನು ಬಂಧಿಸಿ ತನಿಖೆ ನಡೆಸಬೇಕೆಂದು ದೂರಿನಲ್ಲಿ ಆಗ್ರಹಿಸಲಾಗಿದೆ.
ಪ್ರದೀಪ್ ಕುಮಾರ್ ಎನ್ನುವವರು ಮಂಗಳೂರಿನ ಬಂದರು ಪೋಲಿಸ್ ಠಾಣೆಗೆ ದೂರು ನೀಡಿದ್ದು, ಬಂದರು ನಿವಾಸಿ ಜುಮ್ಮಾ ಮಸ್ಜಿದ್ ರಸ್ತೆ ನಿವಾಸಿ ಝಾಕೀರ್ ಎನ್ನುವ ವ್ಯಕ್ತಿ ಹಮಾಸ್ ಉಗ್ರರ‌ ಪರವಾಗಿ ಹೇಳಿಕೆ ನೀಡುವ ಮೂಲಕ ರಾಷ್ಟ್ರೀಯ ಭದ್ರತೆಗೆ ಧಕ್ಕೆ‌ ತರುವ ಪ್ರಯತ್ನದ‌ ಜೊತೆಗೆ ತಮ್ಮ ಸಮುದಾಯದವರೆಲ್ಲಾ ಒಟ್ಟಾಗಿ ಎಂದು‌ ಸಂದೇಶ ನೀಡುವ ಮೂಲಕ ಕೋಮು ಪ್ರಚೋದನೆಗೆ ಪ್ರೇರೇಪಣೆ ನೀಡಿದ್ದಾನೆ. ವಿಡಿಯೋವನ್ನು ವೀಕ್ಷಿಸುವಾಗ ಈತನಿಗೆ ಉಗ್ರ ಸಂಘಟನೆಯ‌ ಜೊತೆಗೆ ನಂಟಿರುವಂತೆಯೂ‌ ತೋರುತ್ತಿದ್ದು, ಆತನ ವಿರುದ್ಧ ಕೋಮು‌ಪ್ರಚೋದನೆ, ದೇಶದ್ರೋಹದ ಪ್ರಕರಣ ದಾಖಲಿಸುವಂತೆ ದೂರಿನಲ್ಲಿ ಉಲೇಖಿಸಲಾಗಿದೆ

Leave a Response

error: Content is protected !!