ರಾಜ್ಯ

ಗ್ರಾಮಪಂಚಾಯತ್ ಚುನಾವಣೆಗೆ ಪುತ್ತಿಲ ಪರಿವಾರ ಎಂಟ್ರಿ….!!

ಪುತ್ತೂರು ಜುಲೈ 11 : ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ರಾಗಿ ನಿಂತು ಬಿಜೆಪಿ ಗೆ ಸೋಲಿನ ರುಚಿ ತೋರಿಸಿದ್ದ ಹಿಂದೂಮುಖಂಡ ಅರುಣ್ ಕುಮಾರ್ ಪುತ್ತಿಲ, ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ತಾವು ಬಿಜೆಪಿಯಿಂದ ಹೊರಬಂದ ಬಳಿಕ ತಾವು ಹುಟ್ಟುಹಾಕಿದ್ದ ಪುತ್ತಿಲ ಪರಿವಾರದ ಮೂಲಕ ಇದೀಗ ಸ್ಥಳೀಯ ಚುನಾವಣೆಯಲ್ಲಿ ಅದೃಷ್ಠ ಪರಿಕ್ಷೆಗೆ ಹೊರಟಿದ್ದಾರೆ.

ಪುತ್ತೂರು ತಾಲ್ಲೂಕಿನ ಆರ್ಯಾಪು ಗ್ರಾಮ ಪಂಚಾಯಿತಿ ಮತ್ತು ನಿಡ್ಪಳ್ಳಿ ಗ್ರಾಮ ಪಂಚಾಯಿತಿಯಲ್ಲಿ ತೆರವಾಗಿದ್ದ ತಲಾ ಒಂದು ಸ್ಥಾನಗಳಿಗೆ ಜುಲೈ 26ರಂದು ಉಪಚುನಾವಣೆ ನಡೆಯಲಿದ್ದು, ಈ ಎರಡೂ ಕ್ಷೇತ್ರಗಳಲ್ಲಿ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿಗಳು ಸ್ಪರ್ಧಿಸಲು ಮುಂದಾಗಿದ್ದಾರೆ. ನಿಡ್ಪಳ್ಳಿಯಲ್ಲಿ ಪುತ್ತಿಲ ಪರಿವಾರದ ಅಭ್ಯರ್ಥಿ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ.

ನಿಡ್ಪಳ್ಳಿ ಗ್ರಾಮ ಪಂಚಾಯಿತಿಯ ಒಂದನೇ ವಾರ್ಡ್‌ ಸದಸ್ಯ ಮುರಳೀಕೃಷ್ಣ ಭಟ್ ಕೆಲವು ತಿಂಗಳ ಹಿಂದೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಆ ಸ್ಥಾನದ ಉಪಚುನಾವಣೆಗೆ ಸಂಬಂಧಿಸಿ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿಯಾಗಿ ಜಗನ್ನಾಥ್ ರೈ ಕೊಳಂಬೆತ್ತಿಮಾರ್ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಆರ್ಯಾಪು ಗ್ರಾಮ ಪಂಚಾಯಿತಿಯ ಆರ್ಯಾಪು ಎರಡನೇ ವಾರ್ಡ್‌ನ (ಆರ್ಯಾಪು 11) ಸದಸ್ಯರಾಗಿದ್ದ ನಿವೃತ್ತ ಎಸ್ಐ ರುಕ್ಮಯ್ಯ ಮೂಲ್ಯ ಅವರು ಇತ್ತೀಚೆಗೆ ಹೃದಯಾಘಾತದಿಂದ ನಿಧನರಾಗಿದ್ದು, ಅವರ ಸ್ಥಾನಕ್ಕೆ ಪುತ್ತಿಲ ಪರಿವಾರದವರು ಮಂಗಳವಾರ ನಾಮಪತ್ರ ಸಲ್ಲಿಸಲು ತೀರ್ಮಾನಿಸಿದ್ದಾರೆ

Leave a Response

error: Content is protected !!