

ಗೂನಡ್ಕದ ತೆಕ್ಕಿಲ್ ಮಾದರಿ ಶಾಲೆಯಲ್ಲಿ ಸುಳ್ಯ ತಾಲೋಕಿಗೆ ಪ್ರಪ್ರಥಮ ವಾಗಿ ಅಂತಾರಾಷ್ಟ್ರೀಯ ಮಟ್ಟದ ಶಿಕ್ಷಣ ವ್ಯವಸ್ಥೆಯಾದ ಅಲ್-ಬಿರ್ ಇಸ್ಲಾಮಿಕ್ ಶಿಕ್ಷಣಕ್ಕಾಗಿ ಇಸ್ಲಾಮಿಕ್ ಪ್ರೀ ಸ್ಕೂಲ್ ಜೂ.11 ರಂದು ಆರಂಭಗೊಳ್ಳಲಿದೆ ಎಂದು ತೆಕ್ಕಿಲ್ ಮಾದರಿ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಉನೈಸ್ ಪೆರಾಜೆ ಹೇಳಿದ್ದಾರೆ.

ಸುಳ್ಯ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಕ್ಕಳಿಗೆ ಎಳವೆಯಲ್ಲಿಯೇ ಅರೆಬಿಕ್, ಕನ್ನಡ ಇಂಗ್ಲಿಷ್ ಭಾಷೆಯ ಮೂಲಕ ವಿಶೇಷ ಶಿಕ್ಷಣ ನೀಡುವ ವ್ಯವಸ್ಥೆ ಆಗಿದ್ದು ನುರಿತ ತರಬೇತಿ ಹೊಂದಿದ ಮತ್ತು ಪರಿಣಿತ ಶಿಕ್ಷಕ ವರ್ಗದಿಂದ 4 ವರ್ಷ ಪೂರ್ತಿಯಾಗಿರುವ ಆಯ್ದ 24 ಮಕ್ಕಳಿಗೆ ಮಾತ್ರ ಅವಕಾಶವಿದ್ದು ಆಸಕ್ತ ಪೋಷಕರು ಕೂಡಲೇ ಶಾಲೆಯನ್ನು ಸಂಪರ್ಕಿಸುವಂತೆ ಕೇಳಿಕೊಂಡರಲ್ಲದೆ. ಎಲ್‌ಕೆಜಿ ಪೂರ್ತಿ ಮಾಡಿದ ಮಕ್ಕಳು ಮುಂದಿನ ವರ್ಷಕ್ಕೆ ಯುಕೆಜಿಗೆ ಶಿಕ್ಷಣ ಇದೇ ರೀತಿ ಮುಂದುವರೆದು ಶಿಕ್ಷಣ ನಡೆಯಲಿದೆ.

ಜೂ.11ರಂದು ಪೂ.10 ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ಉದ್ಘಾಟಿಸಲಿದ್ದಾರೆ. ಅರಂತೋಡು ಜುಮ್ಮಾ ಮಸೀದಿಯ ಖತೀಬರಾದ ಇಸಾಕ್ ಬಾಖವಿ ದುವಾ ನೆರವೇರಿಸುವರು. ಸಂಪಾಜೆಯಿಂದ ಸುಳ್ಯ ವ್ಯಾಪ್ತಿಗೆ ಬರುವ 10 ಜಮಾತ್ ಒಳಪಡುವ ಧಾರ್ಮಿಕ ಮುಖಂಡರು ಈ ಕಾರ್ಯಕ್ರಮದಲ್ಲಿ ಉಪಸ್ಥಿತಿ ಇರಲಿದ್ದಾರೆ ಎಂದು ಅವರು ಹೇಳಿದರು
ಸುದ್ದಿಗೋಷ್ಠಿಯಲ್ಲಿ ತೆಕ್ಕಿಲ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಟಿ ಎಂ ಶಹೀದ್ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ರಹೀಂ ಬೀಜದಕಟ್ಟೆ, ತಾಜ್ ಮಹಮ್ಮದ್ ಸಂಪಾಜೆ, ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಸಂಚಾಲಕ ಟಿ.ಎಂ.ಜಾವೇದ್, ಆಸಿಫ್ ಪನ್ನೆ, ಸಾದಿಕ್ ಮಾಸ್ತರ್ ಉಪಸ್ಥಿತರಿದ್ದರು