ಕೌಟುಂಬಿಕ ಸಮಸ್ಯೆಗಳ ಬಗ್ಗೆ ನಕಲಿ ಜ್ಯೋತಿಷಿ ಗಳ ಮೋರೆ ಹೋಗುವ ಮುನ್ನ ಯೋಚಸಿ. ಎಚ್ಚರ ! ಪೇಸ್ಬುಕ್ ನಲ್ಲಿ ಕಾರ್ಯ ಪ್ರವರ್ತಿಸುತಿದೆ ಬಾರಿ ಮೋಸದ ಜಾಲ.


ಪುತ್ತೂರು: ಕೌಟುಂಬಿಕ ಸಮಸ್ಯೆಗೆ ಪೇಸ್ಬುಕ್ ಮೂಲಕ ಜ್ಯೋತಿಷ್ಯ ಪರಿಹಾರ ಕಂಡುಕೊಳ್ಳಲು ಹೋದ ಮಹಿಳೆಯೊಬ್ಬರು ಹಣ ಕಳೆದುಕೊಂಡ ಬಗ್ಗೆ ಮಾಹಿತಿ ನಮ್ಮ ನ್ಯೂಸ್ ಚಾನಲ್ ಗೆ ಲಭ್ಯವಾಗಿದೆ.

ಸುಮನಾ (ಹೆಸರು ಬದಲಾಯಿಸಿದೆ) ಎಂಬ ಮಹಿಳೆ ತಮ್ಮ ಕೌಟುಂಬಿಕ ಸಮಸ್ಯೆ ಪರಿಹಾರಕ್ಕಾಗಿ ಪೇಸ್ಬುಕ್ ನಲ್ಲಿ ಪ್ರಸಾರವಾದ ಜಾಹೀರಾತು ನೋಡಿ ಪರಶುರಾಮ್ ಎಚ್ ಆಂಜನೇಯ ಸ್ವಾಮಿ ಆರಾಧಕರು ಮೊಬೈಲ್ ನಂಬರ್ 9663311228 ಎಂಬ ನಕಲಿ ಜ್ಯೋತಿಷಿ ಯ ಬಳಿ ತಮ್ಮ ಸಮಸ್ಯೆ ಪರಿಹಾರಕ್ಕಾಗಿ ಕೇಳಿದಾಗ ಫೋನ್ ಪೇ ಮೂಲಕ 3500 ರೂಪಾಯಿ ಕಳಿಸಿದರೆ ನಿಮ್ಮ ಸಮಸ್ಯೆ ಪರಿಹಾರ ಆಗುದಾಗಿ ನಂಬಿಸಿ ಹಣ ಪಡೆದು ನಂತರ ಮರುದಿನ ಮತ್ತೆ ಕರೆಮಾಡಿದಾಗ ನಿಮ್ಮ ಸಮಸ್ಯೆ ದೊಡ್ಡದು ಅದಕ್ಕೆ ಮತ್ತೆ ಪುನಃ 15000 ರೂಪಾಯಿ ಕೊಡುವಂತೆ ಬೇಡಿಕೆ ಇಟ್ಟಿರುವ ಬಗ್ಗೆ ತಿಳಿದಿದೆ.

ಇತ್ತ ಹಣ ಕಳೆದುಕೊಂಡ ಮಹಿಳೆ ಸಮಸ್ಯೆಯೂ ಪರಿಹಾರವಾಗದೆ ಹಣವೂ ಕಳೆದುಕೊಂಡು ಇದೊಂದು ವ್ಯವಸ್ಥಿತ ಹಣ ಮಾಡುವ ನಕಲಿ ಜ್ಯೋತಿಷಿ ಜಾಲ ಎಂದು ತಿಳಿದು ಮತ್ತಷ್ಟು ಜನ ಮೋಸ ಹೋಗದೆ ಇರಲಿ ಎನ್ನುವ ಉದ್ದೇಶದಿಂದ ನಮ್ಮ ನ್ಯೂಸ್ ಚಾನಲ್ ಗೆ ಮಾಹಿತಿ ನೀಡಿದ್ದಾರೆ.