ರಾಜ್ಯ

ಅಂತರಾಷ್ಟ್ರೀಯ ಕ್ರಿಕೆಟ್ ನ ಇತಿಹಾದಲ್ಲಿ ಮೊದಲ ಬಾರಿ ಟೈಮ್ಡ್ ಔಟ್ ಆದ ಶ್ರೀಲಂಕಾದ ಆಟಗಾರ.
ಸಾಮಾಜಿಕ ಜಾಲತಾಣದಲ್ಲಿ ಬಿರುಸುಗೊಂಡ ಪರ ವಿರೋಧದ ಚರ್ಚೆ.

ದೆಹಲಿ ನವೆಂಬರ್ 06: ಇಂದು ದೆಹಲಿಯಲ್ಲಿ ನಡೆದ ಬಾಂಗ್ಲಾದೇಶ ಮತ್ತು ಶ್ರೀಲಂಕಾ ನಡುವಿನ ಪಂದ್ಯ ಒಂದು ವಿಶೇಷ ಘಟನೆಗೆ ಸಾಕ್ಷಿಯಾಯಿತು. ಅಂತರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಆಟಗಾರನೊಬ್ಬ ಟೈಮ್ಡ್ ಔಟ್ (timedout) ಆಗಿದ್ದಾರೆ.
ಶ್ರೀಲಂಕಾದ ಬ್ಯಾಟ್ಸ್ ಮನ್ ಏಂಜೆಲೊ ಮ್ಯಾಥ್ಯೂಸ್ ಟೈಮಡ್ ಔಟ್ ಆದ ಆಟಗಾರ. ಸೋಮವಾರ ದೆಹಲಿಯಲ್ಲಿ ಬಾಂಗ್ಲಾದೇಶ ವಿರುದ್ಧದ ಅವರ ತಂಡದ ನಿರ್ಣಾಯಕ ಘರ್ಷಣೆಯಲ್ಲಿ ಶ್ರೀಲಂಕಾ ಸ್ಟಾರ್ ಏಂಜೆಲೊ ಮ್ಯಾಥ್ಯೂಸ್ ಅವರನ್ನು ಟೈಮ್ಡ್ ಔಟ್ ಮೂಲಕ ಔಟ್ ಮಾಡಲಾಯಿತು.

ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ ಎಸೆದ 25ನೇ ಓವರ್‌ನ ಎರಡನೇ ಎಸೆತದಲ್ಲಿ ಈ ಘಟನೆ ನಡೆದಿದೆ. ಸದೀರ ಸಮರವಿಕ್ರಮ ಆಗಷ್ಟೇ ಔಟಾದರು ಮತ್ತು ನಾಲ್ಕನೇ ವಿಕೆಟ್ ಪತನದ ಸಮಯದಲ್ಲಿ ಏಂಜೆಲೊ ಮ್ಯಾಥ್ಯೂಸ್ ಕ್ರೀಸ್‌ಗೆ ಬಂದರು. ಆದರೆ ಮ್ಯಾಥ್ಯೂಸ್ ಬರುವಾಗ ಬೆರೆ ಹೆಲ್ಮೇಟ್ ತಂದಿದ್ದರು. ಇದರಿಂದಾಗಿ ಮತ್ತೆ ಅವರಿಗೆ ಹೆಲ್ಮೇಟ್ ತರಲು ಹೆಚ್ಚು ಸಮಯವಾಗಿದೆ. ಈ ಹಿನ್ನಲೆ ಬಾಂಗ್ಲಾದೇಶದ ಆಟಗಾರರು ಅಂಪೈರ್ ಬಳಿ ಅಪೀಲ್ ಮಾಡಿದ್ದರು. ಈ ಹಿನ್ನಲೆ ಅಂಪೈರ್ ಮಾಥ್ಯೂಸ್ ಔಟ್ ಎಂದು ಘೋಷಿಸಿದರು.ಇದೀಗ ಈ ನಿರ್ಣಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆ ನಡೆಯುತ್ತಿದೆ

ಅಂತರಾಷ್ಟ್ರೀಯ ಕ್ರಿಕೆಟ್ ನ ನಿಯಮದ ಪ್ರಕಾರ ಯಾವುದೇ ಬ್ಯಾಟ್ಸ್ ಮನ ಔಟಾದ ಮೂರು ನಿಮಿಷಗಳ ಒಳಗೆ ಮತ್ತೊಬ್ಬ ಆಟಗಾರ ಮೈದಾನದಲ್ಲಿದ್ದು, ಆಟಕ್ಕೆ ತಯಾರಿರಬೇಕು. ಆದರೆ ಇಲ್ಲಿ ಮಾಥ್ಯೂಸ್ 3 ನಿಮಿಷಗಳ ನಂತರ ಆಟಕ್ಕೆ ಸಿದ್ದರಾಗಿದ್ದರು. ಈ ಹಿನ್ನಲೆ ಅವರನ್ನು ಔಟ್ ಎಂದು ತೀರ್ಮಾನಿಸಲಾಗಿತ್ತು. ಕಾಮೆಂಟರಿ ಮಾಡುವಾಗ ಶ್ರೀಲಂಕಾದ ಮಾಜಿ ಆಟಗಾರ ರಸೆಲ್ ಅರ್ನಾಲ್ಡ್ , “ನಾನು ಈ ರೀತಿಯದನ್ನು ನೋಡುತ್ತಿರುವುದು ಇದೇ ಮೊದಲು” ಎಂದು ಹೇಳಿದರು

Leave a Response

error: Content is protected !!