ಕಾಂಗ್ರೆಸ್ ನ ಗ್ಯಾರಂಟಿಯನ್ನು ಪ್ರಶ್ನಿಸುವ ಬಿಜೆಪಿಯವರು ರಾಜಸ್ಥಾನಕ್ಕೆ ಹೋಗಿಬರಲಿ ,ಪ್ರಧಾನಿ ಮೋದಿ ಕೂಡ ಹೋಗಿ ಬರಲಿ-ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ ರಾಮಕುಂಜ


ಕಡಬ: ಕಾಂಗ್ರೆಸ್ ನೀಡಿರುವ ಗ್ಯಾರಂಟಿಗಳು ಎಂದೂ ಸುಳ್ಳಾಗುವುದಿಲ್ಲ,ನಮ್ಮ ಸರ್ಕಾರ ಬಂದ ಕೂಡಲೇ ಜಾರಿಗೆ ಬರಲಿದ್ದು ಸುಳ್ಯದಲ್ಲಿ ಗೆಲುವಿನ ಭರವಸೆ ಇದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ ರಾಮಕುಂಜ ಹೇಳಿದ್ದಾರೆ.
ಕಡಬದ ಕೋಡಿಂಬಾಳ ಶ್ರೀ ನಾಗಬ್ರಹ್ಮ ಆದಿಮೊಗೇರ್ಕಳ ದೈವಸ್ಥಾನಕ್ಕೆ ಎ.30 ರಂದು ಭೇಟಿ ನೀಡಿದ ವೇಳೆ ಮಾದ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು ಕಾಂಗ್ರೆಸ್ ನ ಗ್ಯಾರಂಟಿಯನ್ನು ಪ್ರಶ್ನಿಸುವ ಬಿಜೆಪಿಯವರು ರಾಜಸ್ಥಾನಕ್ಕೆ ಹೋಗಿಬರಲಿ ,ಪ್ರಧಾನಿ ಮೋದಿ ಕೂಡ ಹೋಗಿ ಬರಲಿ ಅಲ್ಲಿ ನಮ್ಮದೇ ಸರ್ಕಾರವಿದೆ. ಅಲ್ಲಿನ ಯೋಜನೆಯನ್ನು ನಮ್ಮ ಸರ್ಕಾರ ಬಂದ ಕೂಡಲೇ ಸಿದ್ದರಾಮಯ್ಯ ಜಾರಿಗೆ ತಂದ ಯೋಜನೆಗಳ ಸಹಿತ ಕರ್ನಾಟದಲ್ಲೂ ಜಾರಿಗೊಳಿಸುತ್ತೇವೆ.
ಸುಳ್ಯಕ್ಕೆ ಖರ್ಗೆ ಆಗಮನದ ಬಳಿಕ ಹೊಸ ಬದಲಾವಣೆಯ ಗಾಳಿ ಬೀಸಿದೆ, ಎದುರಾಳಿ ಸ್ಪರ್ಧಿಗಳ ಎದುರು ಅಧಿಕ ಅಂತರದಿಂದ ಗೆಲ್ಲುವ ವಿಶ್ವಾಸವಿದೆ ಎಂದರು .ಈವೇಳೆ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್, ಮಾಜಿ ಜಿ.ಪಂ ಸದಸ್ಯ ಪಿ.ಪಿ ವರ್ಗೀಸ್, ಜ್ಯೋತಿ ಡಿ ಕೋಲ್ಪೆ ಸೇರಿದಂತೆ ಪಕ್ಷದ ಪ್ರಮುಖರು ಜತೆಗಿದ್ದರು