

ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.
ಕೃಷ್ಣಪ್ಪರವರು ನಿನ್ನೆ ಸುಳ್ಯ ತಾಲೂಕಿನ ಅರಂತೋಡಿನಲ್ಲಿ ನಾಯಕರ ಮನೆ ಭೇಟಿ ನಡೆಸಿದರು. ಅರಂತೋಡಿನಲ್ಲಿರುವ ಪಿ.ಬಿ. ದಿವಾಕರ ರೈಯವರ ಮನೆಗೆ, ಅರಂತೋಡು ಗ್ರಾಮ ಸಮಿತಿ ಅಧ್ಯಕ್ಷ ಜನಾರ್ದನ ಅಡ್ಕಬಳೆಯವರ ಮನೆಗೆ ಹಾಗೂ
ಅರಂತೋಡು ಗ್ರಾಮ ಕಾಂಗ್ರೆಸ್ ಮಾಜಿ ಅಧ್ಯಕ್ಷ ದೇವಪ್ಪ ಗೌಡರ ಮನೆಗೆ ಭೇಟಿ ನೀಡಿದ ಅವರು, ಬೆಂಬಲ ಯಾಚಿಸಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ್, ಪ್ರಚಾರ ಸಮಿತಿ ಅಧ್ಯಕ್ಷ ಸದಾನಂದ ಮಾವಜಿ, ಎನ್‌ಎಸ್‌ಯುಐ ಅಧ್ಯಕ್ಷ ಕೀರ್ತನ್ ಕೊಡಪಾಲ, ನಿತ್ಯಾನಂದ ಕುಕ್ಕುಂಬಳ, ತಾಜುದ್ದೀನ್ ಅರಂತೋಡು, ಆದಂ ಹಲ್ಯಾರ ಮೊದಲಾದವರು ಜೊತೆಗಿದ್ದರು.

add a comment