ರಾಜ್ಯ

ಚಂದ್ರಯಾನ-3: ವಿಶ್ವದ ಚಿತ್ತ ಭಾರತದತ್ತ; ಚಂದ್ರನ ಅಂಗಳದಲ್ಲಿಂದು ವಿಕ್ರಮನ ಪಾದಸ್ಪರ್ಶಕ್ಕೆ ಕ್ಷಣಗಣನೆ

ಭಾರತದ ಕನಸಿನ ನೌಕೆ ಚಂದ್ರಯಾನ-3 ಯಶಸ್ವಿಗೆ ಕೆಲವೇ ಗಂಟೆಗಳು ಬಾಕಿ. ಅದಕ್ಕೂ ಮುನ್ನ ಕೆಲವು ಚಾಲೆಂಜ್​ಗಳನ್ನು ಎದುರಿಸಬೇಕಿದೆ. ಚಂದ್ರನನ್ನು ಸ್ಪರ್ಶಿಸಲು ಲ್ಯಾಂಡರ್​ನ ವೇಗ, ಸಮಯ ಪ್ರಶ್ನೆ, ಸರಿಯಾದ ಸ್ಥಳ ಇವೆಲ್ಲವನ್ನು ಗಮನದಲ್ಲಿರಿಸಿಕೊಂಡು ಇಸ್ರೋ ಕೆಲಸ ಮಾಡುತ್ತಿದೆ. ಇಸ್ರೋಗೆ ಕೊನೆಯ 15 ನಿಮಿಷಗಳು ಸವಾಲಾಗಿದೆ.

ಲ್ಯಾಂಡರ್ ಚಂದ್ರನ ನಿರ್ದಿಷ್ಟ ಸ್ಥಳದಲ್ಲಿ ಸ್ಪರ್ಶಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ರೋವರ್ ನ್ನು ನಿಯೋಜಿಸುತ್ತದೆ. ಇದು ಅದರ ಚಲನಶೀಲತೆಯ ಅವಧಿಯಲ್ಲಿ ಚಂದ್ರನ ಮೇಲ್ಮೈಯ ಸ್ಥಳದಲ್ಲಿ ರಾಸಾಯನಿಕ ವಿಶ್ಲೇಷಣೆಯನ್ನು ನಡೆಸುತ್ತದೆ. ಲ್ಯಾಂಡರ್​ ಇಳಿಸುವ ಪ್ರಕ್ರಿಯೆಗೋಸ್ಕರ ವಿಜ್ಞಾನಿಗಳು ನಿರಂತರ ಕೆಲಸದಲ್ಲಿ ತೊಡಗಿದ್ದಾರೆ.

ಸಂಜೆ 5.47– 30 ಕಿ.ಮೀ ಎತ್ತರದಿಂದ ವೇಗ ತಗ್ಗಿಸಿ ಲ್ಯಾಂಡರ್​ ಇಳಿಸುವ ಪ್ರಕ್ರಿಯೆ
ಸಂಜೆ : 5.58– 11 ನಿಮಿಷದಲ್ಲಿ ಚಂದ್ರನಿಂದ 7.4 ಕಿ.ಮೀ. ಎತ್ತರಕ್ಕೆ ಇಳಿಯಲಿದೆ
ಸಂಜೆ 5.59- ಅಡ್ಡಲಾಗಿ ಸಾಗುತ್ತಿದ್ದ ಲ್ಯಾಂಡರ್​ನ್ನ ನೇರವಾಗಿಸುವ ಪ್ರಕ್ರಿಯೆ
ಸಂಜೆ 6.02- ನೇರಗೊಂಡ ಲ್ಯಾಂಡರ್​ ಅನ್ನು 800 ಮೀ. ಇಳಿಸಲಾಗುವುದು
ಸಂಜೆ 6.03– 150 ಮೀ.ನಷ್ಟು ಸನಿಹಕ್ಕೆ ಬಂದು ಲ್ಯಾಂಡಿಂಗ್​ ಸ್ಥಳ ಪರಿಶೀಲನೆ
ಸಂಜೆ 6.04- ಎಲ್ಲವೂ ಸರಿಯಿದ್ದರೆ ಗರಿಷ್ಟ 3 ಮೀ. ವೇಗದಲ್ಲಿ ಲ್ಯಾಂಡಿಂಗ್​​

ಜುಲೈ 12ರಂದು ಭೂಲೋಕದಿಂದ ಚಂದ್ರಲೋಕದ ದಾರಿ ಹಿಡಿದು ಪಯಣ ಆರಂಭಿಸಿದ ಈ ಚಂದ್ರಯಾನ 3 ಒಂದಲ್ಲ, ಎರಡಲ್ಲ ಬರೋಬ್ಬರಿ 41 ದಿನಗಳ ಸುದೀರ್ಘ ಪಯಣವನ್ನ ನಡೆಸಿದೆ. ಸದ್ಯ ಈ ಪ್ರಯಾಣಕ್ಕೆ ಪೂರ್ಣ ವಿರಾಮ ಬೀಳುವ ಸುಮುಹೂರ್ತ ಸನಿಹವಾಗಿದೆ. ಇಂದು ಚಂದ್ರನನ್ನು ಸ್ಪರ್ಶಿಸಲು ಸಜ್ಜಾಗಿರೋ ಚಂದ್ರಯಾನ 3ಯನ್ನು ವೀಕ್ಷಿಸಲು ಇಡೀ ವಿಶ್ವವೇ ಕಾತುರತೆಯಿಂದ ಕಾದುಕುಳಿತಿದೆ.

ಇಂದು ಸಂಜೆ 6 ಗಂಟೆ ಬಳಿಕ ಶಶಿಯ ಮೇಲೆ ಚಂದ್ರಯಾನ 3 ಬಾಹ್ಯಾಕಾಶ ನೌಕೆಯ ವಿಕ್ರಮ್​ ಲ್ಯಾಂಡಿಂಗ್​​ ಆಗುತ್ತೆ. ಆದರೆ ಈ ಲ್ಯಾಂಡಿಂಗ್​ ಅಷ್ಟು ಸುಲಭದ ಮಾತಲ್ಲ. ಲ್ಯಾಂಡಿಂಗ್​ ವೇಳೆ ಇಸ್ರೋ ಸ್ವಲ್ಪ ಎಚ್ಚರ ತಪ್ಪಿದರೂ ಸಮಸ್ಯೆ ಎದುರಿಸಬೇಕಾಗುತ್ತೆ. ಅಲ್ಲದೇ ಲ್ಯಾಂಡಿಂಗ್​ ವೇಳೆ ಅಂದುಕೊಂಡ ಪರಿಸ್ಥಿತಿ ಇದ್ರೆ ಮಾತ್ರ ಸಾಫ್ಟ್​​ ಲ್ಯಾಂಡಿಂಗ್​ ಸಕ್ಸಸ್​ ಆಗುತ್ತೆ. ಒಂದು ವೇಳೆ ಇಂದು ಲ್ಯಾಂಡಿಂಗ್​​ ಸಾಧ್ಯವಾಗದಿದ್ರೆ ಮುಂದೇನು? ಹೀಗೊಂದು ದೊಡ್ಡ ಸವಾಲು ಇಸ್ರೋ ವಿಜ್ಞಾನಿಗಳ ಮುಂದೆಯೂ ಇದೆ

Leave a Response

error: Content is protected !!