ರಾಜ್ಯ

ಸುಳ್ಯದ ಚಂದ್ರಾವತಿ ಬಡ್ಡಡ್ಕರಿಗೆ ಒಲಿದ ಕರ್ನಾಟಕ ಲೇಖಕಿಯರ ಸಂಘ ಕೊಡಮಾಡುವ ನುಗ್ಗೆಹಳ್ಳಿ ಪಂಕಜ ದತ್ತಿ ಪ್ರಶಸ್ತಿ

ಕರ್ನಾಟಕ‌ ಲೇಖಕಿಯರ‌ ಸಂಘದವತಿಯಿಂದ ಕೊಡಮಾಡುವ‌ ದತ್ತಿ‌ ಪ್ರಶಸ್ತಿಯನ್ನು‌ ಹಿರಿಯ ಪತ್ರಕರ್ತೆ ವೃತ್ತಿಪರ ಅನುವಾದಕಿ ಲೇಖಕಿ‌ ಚಂದ್ರಾವತಿ‌ ಬಡ್ಡಡ್ಕ‌ ಪಡೆದುಕೊಂಡರು. ಇವರು ಬರೆದ ಲಘುಬಿಗು ಕೃತಿ 2022ನೇ‌ ಸಾಲಿನ ನುಗ್ಗೇಹಳ್ಳಿ‌ ಪಂಕಜ ಹಾಸ್ಯವಿಭಾಗದ‌ ದತ್ತಿ ಪ್ರಶಸ್ತಿಗೆ‌ ಆಯ್ಕೆಯಾಗಿತ್ತು‌.


ಬೆಂಗಳೂರಿನ‌ ನಯನ‌ ಸಭಾಂಗಣದಲ್ಲಿ‌ ನಡೆದ‌ ಕಾರ್ಯಕ್ರಮದಲ್ಲಿ‌ ಸಂಘದ ಅಧ್ಯಕ್ಷೆ ಎಚ್‌ ಎಲ್‌ ಪುಷ್ಪಾ‌, ಜ್ಞಾನಪೀಠ‌ ಪುರಸ್ಕೃತ ಸಾಹಿತಿ ಚಂದ್ರಶೇಖರ‌ ಕಂಬಾರ‌, ಮಾಜಿ‌ ಕನ್ನಡ‌ ಮತ್ತು‌ ಸಂಸ್ಕೃತಿ‌ ಇಲಾಖೆ‌ ಸಚಿವೆ‌ ರಾಣಿ ಸತೀಶ್, ದತ್ತಿ‌ ಪ್ರಶಸ್ತಿ ತೀರ್ಪುಗಾರರಾಗಿದ್ದ‌ ಹಿರಿಯ ಸಾಹಿತಿ‌, ಬಿಎಂಶ್ರೀ‌ ಪ್ರತಿಷ್ಠಾನದ ಅಧ್ಯಕ್ಷ‌ ಬೈರಮಂಗಲ‌ ರಾಮೇಗೌಡ, ಹಿರಿಯ‌ ವಿಮರ್ಷಕಿ‌ ಎಂ. ಎಸ್. ಆಶಾದೇವಿ‌ ಪ್ರಶಸ್ತಿ‌ ಪ್ರದಾನ‌ ಮಾಡಿದರು‌.
ಕಿಕ್ಕಿರಿದು‌ ತುಂಬಿದ್ದ‌ ಸಭಾಂಗಣದಲ್ಲಿ‌ ನಡೆದ‌ ಸಮಾರಂಭದಲ್ಲಿ ನಾಡಿನ‌ ಹಲವು‌ ಲೇಖಕಿಯರಿಗೆ‌ 2020, 2021 ಹಾಗೂ‌ 2022 ಸಾಲಿನ‌ ದತ್ತಿ‌ ಪ್ರಶಸ್ತಿಗಳನ್ನು‌ ಹಸ್ತಾಂತರಿಸಲಾಯಿತು.

Leave a Response

error: Content is protected !!