ರಾಜ್ಯ

ಬಸ್ಸಿನಲ್ಲಿ ಮಹಿಳೆಯೊಂದಿಗೆ ಯುವಕನಿಂದ ಅನುಚಿತ ವರ್ತನೆ ಪೊಲೀಸ್ ದೂರು

ಪುತ್ತೂರಿನಿಂದ ಕಾಣಿಯೂರು ಕಡೆಗೆ ಬರುವ ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಯುವಕನೋರ್ವ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಮಹಿಳೆಯೋರ್ವರು ಬೆಳ್ಳಾರೆ ಠಾಣೆಯಲ್ಲಿ ಪೊಲೀಸ್ ದೂರು ನೀಡಿದ ಘಟನೆ ನಡೆದಿದೆ.
ದೂರು ದಾಖಲಿಸಿಕೊಂಡ ಪೊಲೀಸರು ಯುವಕನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆಂದು ತಿಳಿದು ಬಂದಿದೆ.ಮಹಿಳೆ ಪುತ್ತೂರಿನಿಂದ ತನ್ನ ಮನೆಯಾದ ಸಮಹಾದಿಗೆ ಬಸ್ಸಲ್ಲಿ ಸಂಜೆ ಬರುತ್ತಿರುವಾಗ ಯುವಕನೋರ್ವ ಲೈಂಗಿಕ ಕಿರುಕುಳ ನೀಡಿದ್ದು ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ದೂರು ನೀಡಿದ್ದರು.
ಆ ಯುವಕ ಫೋನ್ ನಂಬರನ್ನು ಮಹಿಳೆಗೆ ನೀಡಿದ್ದು ಬಳಿಕ ಸವಣೂರಲ್ಲಿ ಬಸ್ಸಿನಿಂದ ಇಳಿದು ಹೋಗಿದ್ದರು.
ಮಹಿಳೆ ದೂರು ನೀಡುವಾಗ ಠಾಣೆಯಲ್ಲಿ ಕಿರುಕುಳ ನೀಡಿದವನ ಫೋನ್ ನಂಬರನ್ನು ನೀಡಿದ್ದು ಈ ನಂಬರ್ ನ ಆಧಾರದಲ್ಲಿ ಕೇರಳದ ವಿಷ್ಣುಮೋಹನ್ ಎಂಬ ಯುವಕನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ

Leave a Response

error: Content is protected !!