ರಾಜ್ಯ

ಎಚ್ ಭೀಮರಾವ್ ವಾಷ್ಠರ್ ರವರ ಮ್ಯೂಸಿಕ್ ಆಲ್ಬಮ್ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆ.

ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಧಾರವಾಡ ಇದರ ವತಿಯಿಂದ ಆಯೋಜಿಸಿದ ಉತ್ತರ ಕರ್ನಾಟಕ ಅಂತಾರಾಷ್ಟ್ರೀಯ ಕಿರು ಚಿತ್ರೋತ್ಸವ -2022 ಕ್ಕೆ ಸುಳ್ಯದ ಸಾಹಿತಿ ಮತ್ತು ಜ್ಯೋತಿಷಿ ಎಚ್ .ಭೀಮರಾವ್ ವಾಷ್ಠರ್ ರವರು ಸಾಹಿತ್ಯ ಬರೆದು ಹಾಡಿರುವ ನಾಗರಹಾಳ ಗುರುಬಾಬಾ ಭಕ್ತಿಗೀತೆಯು ಮ್ಯೂಸಿಕ್ ಆಲ್ಬಮ್ ಸ್ಪರ್ಧೆಗೆ ಆಯ್ಕೆ ಆಗಿದೆ. ಇದೇ ಡಿಸೇಂಬರ್ 15 ರಿಂದ 17 ರವರೆಗೆ ನಡೆಯುವ ಸಮಾರಂಭದಲ್ಲಿ ಫಲಿತಾಂಶ ತಿಳಿಸಿ ಬಹುಮಾನ ನೀಡಲಾಗುವದು ಎಂದು ಪ್ರಕಟಣೆ ತಿಳಿಸಿದೆ .ಭೀಮರಾವ್ ವಾಷ್ಠರ್ ರವರು ಈ ಮುಂಚೆ ನಿರ್ದೇಶನ ಮಾಡಿದ್ದ ಕೋಡಿಹಾಳದ ಚಿತ್ತಾರದ ಕೌದಿ ಚಿತ್ರಕ್ಕೆ ಎರಡು ರಾಜ್ಯಪ್ರಶಸ್ತಿ ಹಾಗೂ ಇವರ ನಿರ್ದೇಶನದ ಪರಿವರ್ತನೆ ಚಿತ್ರಕ್ಕೆ ಒಂದು ಪ್ರಶಸ್ತಿ ಪಡೆದಿರುವುದನ್ನು ಸ್ಮರಿಸಬಹುದು .

Leave a Response

error: Content is protected !!