ರಾಜ್ಯ

ಬೆಂಗಳೂರು : ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್‌.ಪೊನ್ನಣ್ಣ ಅವರ ಕಚೇರಿ ಉದ್ಘಾಟನೆ

ಮಡಿಕೇರಿ : ಬೆಂಗಳೂರಿನ ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ.ಎಸ್‌ ಪೊನ್ನಣ್ಣ ಅವರ ಕಚೇರಿಯನ್ನು ಉದ್ಘಾಟಿಸಲಾಯಿತು.

ವಿಧಾನಸೌಧದ 2 ನೇ ಮಹಡಿಯ 237,238 ಕೊಠಡಿಯಲ್ಲಿ ನೂತನವಾಗಿ ಆರಂಭವಾಗಿರುವ ಕಚೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭ ಕೆಪಿಸಿಸಿ ವಕ್ತಾಕರ ಸಂಕೇತ್‌ ಪೂವಯ್ಯ, ಶಾಸಕ ಪೊನ್ನಣ್ಣ ಪತ್ನಿ ಕಾಂಚನ ಪೊನ್ನಣ್ಣ, ಕಾಂಗ್ರೆಸ್‌ ಪ್ರಮುಖರಾದ ತನ್ನೀರ ಮೈನಾ, ನಾಪೋಕ್ಲು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಇಸ್ಮಾಯಿಲ್‌, ವಿರಾಜಪೇಟೆ ಪ.ಪಂ ಸದ್ಯಸ ಮತೀನ್‌, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್‌, ಕಾಂಗ್ರೆಸ್ ಪ್ರಮುಖ ರೆಹಮಾನ್‌ ಖಾನ್‌ ಸೇರಿದಂತೆ ಕೊಡಗಿನ ಕಾಂಗ್ರಸ್‌ ಪಕ್ಷದ ಪ್ರಮುಖರು ಹಾಜರಿದ್ದರು.

Leave a Response

error: Content is protected !!