ರಾಜ್ಯ

ಹರ್ ಘರ್ ತಿರಂಗಾ ಅಭಿಯಾನ :ಬೆಳ್ಳಾರೆ ಅಂಚೆ ಕಚೇರಿಯಲ್ಲಿ ಜ್ಞಾನದೀಪ ವಿದ್ಯಾರ್ಥಿಗಳಿಂದ ಸಾಮೂಹಿಕವಾಗಿ ರಾಷ್ಟ್ರ ಧ್ವಜ ಖರೀದಿ

ಮನೆ ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸುವ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಬೆಳ್ಳಾರೆ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಬೆಳ್ಳಾರೆಯ ಅಂಚೆ ಕಚೇರಿಯಿಂದ ಸಾಮೂಹಿಕವಾಗಿ ರಾಷ್ಟ್ರಧ್ವಜ ಪಡೆದುಕೊಂಡರು. ಬೆಳ್ಳಾರೆ ಅಂಚೆಕಚೇರಿಯ ಪೋಸ್ಟ್ ಮಾಸ್ಟರ್ ರವಿ, ಸಿಬ್ಬಂದಿಗಳಾದ ಸೌಮ್ಯ, ಬಾಲಕೃಷ್ಣ, ಕೃಪೇಶ್, ಅನಂತಕೃಷ್ಣ, ಜ್ಞಾನದೀಪ ಸಂಸ್ಥೆಯ ಉಪನ್ಯಾಸಕರುಗಳಾದ ಗಣೇಶ್ ನಾಯಕ್, ಶರತ್ ಕಲ್ಲೋಣಿ, ಚಂದ್ರಶೇಖರ್ ಅಲೆಟ್ಟಿ, ಗೀತಾ ಬಾಲಚಂದ್ರ, ಬೃಂದಾ ಕುಂಜಾಡಿ ಉಪಸ್ಥಿತರಿದ್ದರು.ರಾಷ್ಟ್ರಧ್ವಜ ಪಡೆದುಕೊಂಡ ಜ್ಞಾನದೀಪ ವಿದ್ಯಾರ್ಥಿಗಳಿಗೆ ಅಂಚೆ ಕಚೇರಿಯ ಸಿಬ್ಬಂದಿ ಅನಂತಕೃಷ್ಣ ಉಚಿತವಾಗಿ ರಾಷ್ಟ್ರಧ್ವಜ ನೀಡುವ ಮೂಲಕ ಅಭಿಯಾನಕ್ಕೆ ಬೆಂಬಲ ಸೂಚಿಸಿದರು.

Leave a Response

error: Content is protected !!