ಅಶೋಕ್ ಕುಮಾರ್ ರೈ ಯವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಜಿಲ್ಲೆಯಾದ್ಯಂತ ಸಾಮೂಹಿಕ ಪ್ರಾರ್ಥನೆ; ದೇವಸ್ಥಾನ, ಬಸದಿ,ಮಸೀದಿ, ಚರ್ಚ್ ಸಹಿತ 50ಕ್ಕೂ ಅಧಿಕ ಧಾರ್ಮಿಕ ಕೇಂದ್ರಗಳಲ್ಲಿ ಪೂಜೆ.


ಪುತ್ತೂರು: ವಿಧಾನಸಭಾ ಚುನಾವಣೆಗೆ ದಿನಾಂಕ
ನಿಗದಿಯಾಗಿದ್ದು ಕೈ ಕಮಲ ಪಕ್ಷಗಳ ನಡುವೆ ಪೈಪೋಟಿ
ಆರಂಭವಾಗಿ, ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು
ಸಕಲ ಸಿದ್ಧತೆಗಳು ನಡೆಯುತ್ತಿರುವ ಬೆನ್ನಲ್ಲೇ, ಅಶೋಕ್
ಕುಮಾರ್ ರೈ ಅವರಿಗೆ ಜನ ಬೆಂಬಲ ಸಿಗುತ್ತಿದೆ.
ಪುತ್ತೂರು ತಾಲೂಕಿನ ಐವತ್ತಕ್ಕೂ ಅಧಿಕ ದೇವಸ್ಥಾನ,
ಮಸೀದಿ, ಚರ್ಚುಗಳಲ್ಲಿ ಅಶೋಕ್ ಕುಮಾರ್ ರೈಯವರ

ಅಭಿಮಾನಿಗಳು ಪೂಜೆ ಹಾಗೂ ಅವರ ರಾಜಕೀಯ
ಭವಿಷ್ಯ ಉಜ್ವಲವಾಗಿರಬೇಕು ಎಂದು ಪ್ರಾರ್ಥನೆ
ಸಲ್ಲಿಸಿದ್ದಾರೆ.ಅಶೋಕ್ ರೈ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಚುನಾವಣೆಯಲ್ಲಿ ಟಿಕೆಟ್ ಸಿಗಬೇಕು,
ಜಯಗಳಿಸಬೇಕೆಂದು ಪ್ರಾರ್ಥನೆ ಸಲ್ಲಿಸಲಾಯಿತು.ಜಾತಿ, ಧರ್ಮ ಮರೆತು ಅಶೋಕ್ ಕುಮಾರ್ ಅಭಿಮಾನಿಗಳು ಧಾರ್ಮಿಕ ಕೇಂದ್ರಗಳಲ್ಲಿ ಒಟ್ಟು ಸೇರಿ ಪ್ರಾರ್ಥನೆ ನೆರವೇರಿಸಿದ್ದಾರೆ.ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ, ಕೋಡಿಂಬಾಡಿ ಮಹಿಷ ಮರ್ದಿನಿ ದೇವಸ್ಥಾನ, ಬನ್ನೂರು ಗ್ರಾಮದ ಕುಂಟ್ಯಾಣ ಸದಾಶಿವ ದೇವಸ್ಥಾನ, ಶ್ರೀ ಮಹಾವಿಷ್ಣು ದೇವಸ್ಥಾನ ಶಾಂತಿನಗರ, ಪುತ್ತೂರು ಮರ್ಹೂಂ ತಂಜ್ಞಳ್ ರವರ ಮರಾ, ಉಳತ್ತೋಡಿ ಹಿರೇಬಂಡಾಡಿ ಷಣ್ಮುಖ
ದೇವಸ್ಥಾನ, ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನ,
ಪಡುಮಲೆ ದೇವಸ್ಥಾನ, ಶ್ರೀವಿಷ್ಣು ಮೂರ್ತಿ ದೇವಸ್ಥಾನ
ಕುಂಡಡ್ಕ ಕುಳ, ಶ್ರೀ ಕ್ಷೇತ್ರ ಗೆಜ್ಜೆಗಿರಿ, ಪೆರ್ನೆ-ಬಿಳಿಯೂರು
ಕಳೆಂಜ, ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಬೆಳ್ಳಿಪ್ಪಾಡಿ ಶ್ರೀ ಸುಬ್ರಹ್ಮಣೇಶ್ವರ ದೇವಸ್ಥಾನ, ಬೆಳ್ಳಿಪ್ಪಾಡಿ ಶ್ರೀ ವನಶಾಸ್ತರದೇವಸ್ಥಾನ, ವಿಟ್ಲ ಮಾಮೇಶ್ವರ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆಯನ್ನು ನೆರವೇರಿಸಲಾಯಿತು.

