ರಾಜ್ಯ

ಅರಂತೋಡಿನ ಉಳುವಾರಿನಲ್ಲಿ ತೆಂಗಿನ ಮರ ಬಿದ್ದು ಗಾಯಗೊಂಡಿದ್ದ ಮಹಿಳೆ ಮೃತ್ಯು.

ಅರಂತೋಡು ಉಳುವಾರಿನಲ್ಲಿ ತೆಂಗಿನ ಮರ ಮೈಮೇಲೆ ಬಿದ್ದು ಮಹಿಳೆ ಗಂಭೀರ ಗಾಯಗೊಂಡ ಘಟನೆ ನಿನ್ನೆ ವರದಿಯಾಗಿತ್ತು ,ಆದರೆ ಮಹಿಳೆ ಇದೀಗ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ
ಅರಂತೋಡು ಉಳುವಾರು ಮೇದಪ್ಪ ಗೌಡರ
ತೋಟದಲ್ಲಿ ಕೊಡೆಂಕಿರಿಯ ಬಾಲಣ್ಣರವರ ಪತ್ನಿ ಶ್ರೀಮತಿ ಕಮಲರವರು ಅಡಿಕೆ ಹೆಕ್ಕುತ್ತಿದ್ದಾಗ ಒಣಗಿದ ತೆಂಗಿನ ಮರವೊಂದು ಕಮಲರವರ ಮೇಲೆ ಬಿದ್ದು ಗಂಭೀರ ಗಾಯಗಳಾಗಿತ್ತು. ಕೂಡಲೇ ಸ್ಥಳಕ್ಕೆ ಬಂದ ಮೇದಪ್ಪರವರು ಕಮಲರವರನ್ನು ಅರಂತೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಂಬ್ಯುಲೆನ್ಸ್‌ನಲ್ಲಿ ಸುಳ್ಯ ಕೆ.ವಿ.ಜಿ. ಆಸ್ಪತ್ರೆಗೆ ಕರೆತಂದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ನಂತರ ವಾಪಾಸ್ ಸುಳ್ಯದ ಕೆವಿಜಿ ಆಸ್ಪತ್ರೆಗೆ ಕರೆತಂದು ದಾಖಲು ಮಾಡಲಾಗಿತ್ತು ಗಂಭೀರ ಸ್ವರೂಪದ ಗಾಯಗೊಂಡ ಕಾರಣ ಚಿಕಿತ್ಸೆ ಪಲಕಾರಿಯಾಗದೆ ಮಹಿಳೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮೃತರು ಪುತ್ರ ಚಿದಾನಂದ ಮತ್ತು ಪುತ್ರಿ ಮಣಿ ಯವರನ್ನು
ಅಗಲಿದ್ದಾರೆ

Leave a Response

error: Content is protected !!