ರಾಜ್ಯ

ಮನವಿಗೆ ಸ್ಫಂದನೆ ನೀಡದ ಇಲಾಖೆಗಳು ಡಿ.19 ರಂದು ಬೇಡಿಕೆ ಈಡೇರಿಕೆಗಾಗಿ ಸುಳ್ಯ ತಾಲೋಕು ಕಚೇರಿ ಎದುರು ಅಂಬೇಡ್ಕರ್ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆಗೆ ನಿರ್ಧಾರ.

ಹಲವು ಭಾರಿ ಇಲಾಖೆಗಳಿಗೆ ಮನವಿ ಮಾಡಿದರು ಯಾವುದೇ ಕೆಲಸ ಕಾನೂನು ಬದ್ಧವಾಗಿ ಆಗುತ್ತಿಲ್ಲ ಎಲ್ಲಾ ಕಡೆಯಲ್ಲೂ ದಲಿತರಿಗೆ ಒಂದು ಕಾನೂನು ಮೇಲ್ವರ್ಗದವರಿಗೆ ಒಂದು ಕಾನೂನು ಎನ್ನುವ ರೀತಿಯಲ್ಲಿ ಸರಕರಾರಿ ಅಧಿಕಾರಿಗಳು ವರ್ತಿಸುತ್ತಿದ್ದಾರೆ. ಮನವಿಗೆ ಸ್ಫಂದನೆ ನೀಡದ ಇಲಾಖೆಗಳು
ಡಿ.19 ರಂದು ಬೇಡಿಕೆ ಈಡೇರಿಕೆಗಾಗಿ ಸುಳ್ಯ ತಾಲೋಕು ಕಚೇರಿ ಎದುರು ಅಂಬೇಡ್ಕರ್ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆಗೆ ನಿರ್ಧಾರ ಮಾಡಲಾಗಿದೆ ಎಂದು ಅಂಬೇಡ್ಕರ್ ರಕ್ಷಣಾ ವೇದಿಕೆ ಅದ್ಯಕ್ಷ ಸುಂದರ್ ಪಾಠಾಜೆ ತಿಳಿಸಿದ್ದಾರೆ. ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾ ಸಭೆ ಕರೆದು ಅವರು ಈ ವಿವರವನ್ನು ತಿಳಿಸಿದ್ದಾರೆ.


ಸುಳ್ಯ ತಾಲೂಕಿನಲ್ಲಿ ಒಟ್ಟು 700 ಎಕ್ರೆ ಡಿಸಿ ಮನ್ನಾ ಜಾಗ ಇದೆ ಅದರಲ್ಲಿ 300 ಎಕ್ರೆ ಮಾತ್ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸಿಕ್ಕಿರುತ್ತದೆ. ಉಳಿದ ಜಾಗವೆಲ್ಲ ಮೇಲ್ವರ್ಗದವರು ರೆಕಾರ್ಡ್ ಮಾಡಿ ಕೊಂಡಿದ್ದಾರೆ ಇದನ್ನು ಸರ್ವೇ ಮಾಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ನೀಡಬೇಕು ಎಂದು ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಿದರು ಯಾವುದೇ ಕ್ರಮ ಕೈಗೊಂಡಿಲ್ಲ.ಸುಳ್ಯ ಕಸಬ ಗ್ರಾಮದಲ್ಲಿ ಡಿಸಿ ಮನ್ನಾ ಜಾಗ 40 ಎಕ್ರೆ ಇದೆ ಬಂಗ್ಲೆಗುಡ್ಡೆ ಡಿಸಿ ಮನ್ನಾ ಜಾಗದಲ್ಲಿ ಜೇನು ಸೊಸೈಟಿ
ಬಿಲ್ಡಿಂಗ್ ಮತ್ತು ನಗರ ಪಂಚಾಯ್ತಿನವರು ವಿಶ್ರಾಂತಿ ಧಾಮ ನಿರ್ಮಿಸಿದ್ದಾರೆ ಮತ್ತು ಗಾಂಧಿನಗರದಲ್ಲಿ ಡಿಸಿ ಮನ್ನಾ ಜಾಗದಲ್ಲಿ 13 ಮೇಲ್ವರ್ಗದ ಕುಟುಂಬದವರಿಗೆ ರೆಕಾರ್ಡ್ ಮಾಡಿ ಕೊಟ್ಟಿದ್ದಾರೆ. ಕೂಡಲೆ ಆ ರೆಕಾರ್ಡ್ ಅನ್ನು ರದ್ದು ಮಾಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಕೊಡಬೇಕೆಂದು ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಿದರು ಯಾವುದೇ ಕ್ರಮ ಕೈಗೊಂಡಿಲ್ಲ.381/2 ಈ ಸರ್ವೇ ನಂಬರ್ ಜಾಗದಲ್ಲಿ ದಲಿತರಾದ ದಾಸಪ್ಪ ಮೇನಾಲ ಎಂಬವರು ಸುಮಾರು 40 ವರ್ಷಗಳಿಂದ ಈ ಜಾಗದಲ್ಲಿ ವಾಸವಾಗಿದ್ದಾರೆ ಹಲವು ವರ್ಷಗಳಿಂದ ಅಕ್ರಮ ಸಕ್ರಮಕ್ಕೆ ಅರ್ಜಿ ಹಾಕಿದರು ಇದುವರೆಗೂ ರೆಕಾರ್ಡ್ ಮಾಡಿ ಕೊಟ್ಟಿಲ್ಲ ಆ ಜಾಗದ ಸುತ್ತ ಎಲ್ಲರಿಗೂ ರೆಕಾರ್ಡ್ ಆಗಿರುತ್ತದೆ ಆದರೆ ಇವರಿಗೆ ಮಾತ್ರ ಮಾಡಿಕೊಟ್ಟಿಲ್ಲ ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಿದರು ಯಾವುದೇ ಕ್ರಮ ಕೈಗೊಂಡಿಲ್ಲ .ಮಿತ್ತೂರು ಉಬರಡ್ಕ ಗ್ರಾಮದ ಕೊಡಿಯಾಲಬೈಲು ದಲಿತ ಕಾಲೋನಿಗೆ ಸ್ವಚ್ಛ ಭಾರತ ಮಿಷನ್ ಯೋಜನೆ ಅಡಿಯಲ್ಲಿ ಶೌಚಾಲಯ ಮತ್ತು ಸ್ನಾನ ಘಟಕದ ಸಂಕೀರ್ಣ ಕಟ್ಟಡ ಕೋಡಿಯಾಲ ಬೈಲು ದಲಿತ ಕಾಲೋನಿ ಗೆ ಬಂದಿದ್ದನ್ನು ಸ್ಥಳ ಬದಲಾವಣೆ ಮಾಡಿ ಹಿಂದೂ ರುದ್ರ ಭೂಮಿ ಒಳಗೆ ನಿರ್ಮಿಸಿದ್ದಾರೆ ಇದರ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ ಎಂದು ಸಂಬಂಧಪಟ್ಟ ಇಲಾಖೆಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಮನವಿ ಮಾಡಿದರು ಯಾವುದೇ ಕ್ರಮ ಕೈಗೊಂಡಿಲ್ಲ.ಕೂಡಿಯಾಲ ಬೈಲು ದಲಿತ ಕಾಲೋನಿ ಗೆ ಬಂದಿರುವಂತ ಸ್ವಚ್ಛ ಭಾರತ ಮಿಷನ್ ಯೋಜನೆ ಅಡಿಯಲ್ಲಿ ಶೌಚಾಲಯ ಮತ್ತು ಸ್ಥಾನ ಘಟಕದ ಸಂಕೀರ್ಣ ಕಟ್ಟಡ ನಿರ್ಮಿಸಲು 30 ಲಕ್ಷ ಅನುದಾನದ ಕಟ್ಟಡವನ್ನು ಕೊಡಿಯಾಲಬೈಲು ದಲಿತ ಕಾಲೋನಿಯಲ್ಲಿ ನಿರ್ಮಿಸಬೇಕೆಂದು ಸಂಬಂಧ
ಪಟ್ಟ ಇಲಾಖೆಗೆ ಮತ್ತು ಜನಪ್ರತಿನಿಧಿಗಳಿಗೆ ಮನವಿ ಮಾಡಿದರು ಯಾವುದೇ ಕ್ರಮ ಕೈಗೊಂಡಿಲ್ಲ.
ಮಿತ್ತೂರು ಉಬರಡ್ಕ ಗ್ರಾಮದ ಅಮೈ ಪಾಲಡ್ಕ ಇಲ್ಲಿ ದೊಡ್ಡ ಸೇತುವೆ ನಿರ್ಮಿಸಬೇಕೆಂದು ಹಲವು ವರ್ಷಗಳಿಂದ ಮನವಿ ಮಾಡಿದರು ಯಾವುದೇ ಕ್ರಮ ಕೈಗೊಂಡಿಲ್ಲ ಪಾಲಡ್ಕ ಎಂಬಲ್ಲಿಗೆ ಬಂದಂತ ಸೇತುವೆಯನ್ನು ಕಡಬಕೆ ಹಾಕಿದ್ದಾರೆ ಆದ ಕಾರಣ ಇಲ್ಲಿಗೆ ಒಂದು ಸೇತುವೆ ನಿರ್ಮಿಸಿ ಕೊಡಿ ಎಂದು ಸಂಬಂಧಪಟ್ಟ ಇಲಾಖೆಗೆ ಮತ್ತು ಜನಪ್ರತಿನಿಧಿಗಳಿಗೆ ಮನವಿ ಮಾಡಿದರು ಯಾವುದೇ ಕ್ರಮ ಕೈಗೊಳ್ಳುವುದಿಲ್ಲ .ಅರಂತೋಡು ಗ್ರಾಮದ ಅರಮನೆ ಗಯ ಎಂಬಲ್ಲಿ 30 ವರ್ಷಗಳಿಂದ ಸೇತುವೆ ನಿರ್ಮಿಸಿ ಕೂಡಿ ಎಂದು ಸಂಬಂಧಪಟ್ಟ ಇಲಾಖೆಗೆ ಮತ್ತು ಜನಪ್ರತಿನಿಧಿಗಳಿಗೆ ಮನವಿ ಮಾಡಿದರು ಯಾವುದೇ ಕ್ರಮ ಕೈಗೊಂಡಿಲ್ಲ.ಮಿತ್ತೂರು ಉಬರಡ್ಕ ಗ್ರಾಮದ ಯಾವಟೆ ಕಟ್ಟಕೋಡಿ ಸಂಪರ್ಕ ರಸ್ತೆಗೆ ಕಾಂಕ್ರೀಟ್‌ಕರಣ ಮತ್ತು ಮಂಜಿಕಾನ ಬದನಕಜೆ ಸಂಪರ್ಕ ರಸ್ತೆ ಕಾಂಕ್ರೀಟ್‌ಕರಣ ಮತ್ತು ಸೇತುವೆ ನಿರ್ಮಿಸಿ ಕೊಡುವ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಮತ್ತು ಜನಪ್ರತಿನಿಧಿಗಳಿಗೆ ಮನವಿ ಮಾಡಿದರು ಯಾವುದೇ ಕ್ರಮ ಕೈಗೊಂಡಿಲ್ಲ.ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಯನ್ನು ತಾಲೂಕು ಕಚೇರಿ ಮುಂಭಾಗದಲ್ಲಿ ನಿರ್ಮಿಸಿ ಕೊಡುವುದೆಂದು ಹೇಳಿ ಇದುವರೆಗೂ ಅದರ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಅರಂತೋಡು ಗ್ರಾಮದ ನೆಕ್ಕರೆಮಲೆ ಸಂಪರ್ಕ ರಸ್ತೆಗೆ ಕಾಂಕ್ರೀಟ್‌ಕರಣ ಮತ್ತು ಸೇತುವೆ ನಿರ್ಮಿಸಿ ಕೊಡಿ ಎಂದು ಸಂಬಂಧಪಟ್ಟ ಇಲಾಖೆಗೆ ಮತ್ತು ಜನಪ್ರತಿನಿಧಿಗಳಿಗೆ ಮನವಿ ಮಾಡಿದರು ಯಾವುದೇ ಕ್ರಮ ಕೈಗೊಂಡಿಲ್ಲ.
ಈ ಹತ್ತು ಬೇಡಿಕೆ ಕೂಡಲೇ ಈಡೇರಿಸಬೇಕು ಬೇಡಿಕೆ ಈಡೇರದಿದ್ದ ಪಕ್ಷದಲ್ಲಿ ಡಿ.19 ಸೋಮವಾರದಂದು
11.00 ಗಂಟೆಗೆ ಸುಳ್ಯ ತಾಲೂಕು ಕಚೇರಿಯ ಮುಂಭಾಗದಲ್ಲಿ ಅಂಬೇಡ್ಕರ್ ರಕ್ಷಣೆ ವೇದಿಕೆ ವತಿಯಿಂದ ಪ್ರತಿಭಟನೆ ಮತ್ತು ಧರಣಿ ಮಾಡಲಿದ್ದೇವೆ ನಮ್ಮ ಈ ಎಲ್ಲ ಬೇಡಿಕೆ ಈಡೇರುವವರಿಗೆ ಧರಣಿ ಮಾಡಲಿದ್ದೇವೆ ಎಂದು ಹೇಳಿದರು ಪತ್ರಿಕಾಗೋಷ್ಟಿಯಲ್ಲಿ ಅಂಬೇಡ್ಕರ್ ರಕ್ಷಣಾ ವೇದಿಕೆಯ ಭಾಲಕೃಷ್ಣ, ನವೀನ್ ಅರಮನೆಗಯ, ತೇಜಕುಮಾರ್, ದಾಸಪ್ಪ, ರಮೇಶ್ ಕೊಡಂಕೇರಿ, ರಾಮಕೃಷ್ಣ ಮೊದಲಾದವರಿದ್ದರು.

Leave a Response

error: Content is protected !!