

ಪುತ್ತೂರು: ಅಡಿಕೆ ಬೆಳೆಗಾರರನ್ನೇ ಹೆಚ್ಚಾಗಿ ಹೊಂದಿರುವ ದಕ್ಷಿಣ ಕನ್ನಡದಲ್ಲಿ, ಈ ಜಿಲ್ಲೆಯ ಪುತ್ತೂರಿನ ಶಾಸಕರು ಅಡಿಕೆ ಬೆಳೆಯ ಬಗ್ಗೆ ಸದನದಲ್ಲಿ ಮಾತನಾಡುವುದನ್ನು ಬಿಟ್ಟು ಇತರ ಬೆಳೆಗಳತ್ತ ಮಾತನಾಡುವ ಮೂಲಕ ಅಡಿಕೆಯನ್ನು ನಿರ್ಲಕ್ಷಿಸುತ್ತಿದ್ದಾರೆ ಮತ್ತು ರೈತರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಆರೋಪವನ್ನು ಮಾಡಿದ್ದಾರೆ.

ಅವರು ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸದನದಲ್ಲಿ ಗೃಹಸಚಿವರು ಅಡಿಕೆಗೆ ಭವಿಷ್ಯವಿಲ್ಲ, ಅದಕ್ಕೆ ಪ್ರೋತ್ಸಾಹ ಕೊಡಬೇಡಿ ಎಂದು ಹೇಳುತ್ತಿರುವಾಗ ಪುತ್ತೂರಿನ ಶಾಸಕರು ತೆಪ್ಪಗೆ ಕುಳಿತ್ತಿದ್ದರು. ಮಾತನಾಡುವ ಸಮಯದಲ್ಲಿ ಮಾತನಾಡದೆ , ಅಡಿಕೆ ಬೆಳೆ ಎದುರಿಸುತ್ತಿರುವ ಸಮಸ್ಯೆ,ಸಂಕಷ್ಡಗಳ ಬಗ್ಗೆ ಮಾತನಾಡದೆ ,ಇತರ ಬೆಳೆಗಳಾದ ತಾಳೆ ಕೃಷಿ, ರಂಬೂಟಾನ್ ಕೃಷಿ ಬಗ್ಗೆ ಮಾತನಾಡುತ್ತಿದ್ದಾರೆ. ಅಡಿಕೆ ಬೆಳೆ ದಕ್ಷಿಣಕನ್ನಡ ಜಿಲ್ಲೆಯ ಜನರ ಜೀವನಾಡಿಯಾಗಿದ್ದು,ಇಲ್ಲಿಯವರು ಇದನ್ನೆ ನಂಬಿ ಜೀವನ ಮಾಡುವವರು, ಅಡಿಕೆ ಬಗ್ಗೆ ಚಕಾರವೆತ್ತುತ್ತಿಲ್ಲ ಎಂದು ಅವರು ಆರೋಪಿಸಿದರು. ಅಲ್ಲದೆ ಮುಂದೆ ಮಾತನಾಡುತ್ತಾ ನಾವು ನಿಮ್ಮ ಹಾಗೆ ಕೋಮುಗಲಬೆ ಮಾಡಿ ಚುನಾವಣೆ ಎದುರಿಸುವುದ್ದಿಲ್ಲ, ಒಟರ್ ಲಿಸ್ಟ್ ಡಿಲೀಟ್ ಮಾಡಿ ಚುನಾವಣೆ ಗೆಲ್ಲುವುದಿಲ್ಲ,ಐಡಿ ಇಡಿ ದಾಳಿ ಸಂಘಟಿಸಿ ಚುನಾವಣೆಯಲ್ಲಿ ಎದುರಾಳಿಗಳನ್ನು ಮಟ್ಟ ಹಾಕುವುದಿಲ್ಲ,ಆಪರೇಷನ್ ಕಮಲ ನಡೆಸಿ ಅಧಿಕಾರ ಹಿಡಿದಿಲ್ಲ, ಇದು ನಮಗೂ ನಿಮಗೂ ಇರುವ ವ್ಯತ್ಯಾಸ, ನಾವು ಚುನಾವಣಾ ತಯಾರಿ ಮಾಡುತ್ತಿದ್ದೇವೆ ಎಂದು ಹೇಳಿದಿರಿ, ಹಾಗಾದರೆ ನೀವು ಮಾಡುತ್ತಿರುವುದು ಏನು ಎಂದು ಬಿಜೆಪಿ ಪಕ್ಷದ ವಿರುದ್ದ ಅಮಳ ರಾಮಚಂದ್ರರು ಹರಿಹಾಯ್ದರು.
