ರಾಜ್ಯ

ಅಖಿಲ ಭಾರತ ಕರ್ತವ್ಯ ಕೂಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿರುವ ಬೆಳ್ತಂಗಡಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗೋಲ್ಡ್ ಮೆಡಲಿಸ್ಟ್ ಹರೀಶ್.ಎಂ‌‌

.

ಅಖಿಲ ಭಾರತ ಕರ್ತವ್ಯ ಕೂಟದಲ್ಲಿ ದ.ಕ.ಜಿಲ್ಲೆಯ ಬೆಳ್ತಂಗಡಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹರೀಶ್ ಎಂ‌‌.ಅವರು ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.
ಫೆ. 13. ರಿಂದ 17 ರ ವರೆಗೆ ಭೂಪಾಲ್ನಲ್ಲಿ ನಡೆಯಲಿರುವ ಅಖಿಲ ಭಾರತ ಪೊಲೀಸ್ ಕರ್ತವ್ಯ ಕೂಟದಲ್ಲಿ “Scientific Aids to Investigation ವಿಭಾಗದ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದಿಂದ ಬೆಳ್ತಂಗಡಿ ಪೊಲೀಸ್ ಠಾಣೆ ಉಪನಿರೀಕ್ಷಕ ಹರೀಶ್, ಎಂ. ಆರ್. ಇವರನ್ನು ನಿಯೋಜಿಸಿರುತ್ತಾರೆ. ತಕ್ಷಣದಿಂದ ಅವರನ್ನು ಬಿಡುಗಡೆಗೊಳಿಸಿ ಫೆ. 06 ರಂದು ಪೊಲೀಸ್ ಕರ್ತವ್ಯ ಕೂಟದ ಕಿಟ್‌ಗಳೊಂದಿಗೆ ಡಿಸಿಪಿ ಸಿಎಆರ್ ದಕ್ಷಿಣ ಬೆಂಗಳೂರು ರವರ ಬಳಿ ವರದಿ ಮಾಡಲು ಸೂಚಿಸಿರುತ್ತಾರೆ.
ಡಿಸಿಪಿ ಸಿಎಆರ್ ದಕ್ಷಿಣ ಬೆಂಗಳೂರು ಇಲ್ಲಿಗೆ ಫೆ. 05ರಂದು ವರದಿ ಮಾಡುವಂತೆ ಸೂಚಿಸಿದ್ದಾರೆ.
ಕರ್ನಾಟಕದ ಗೋಲ್ಡ್ ಮೆಡಲ್ ಪೋಲೀಸ್ ಅಧಿಕಾರಿ
‌‌ ಹರೀಶ್ ಎಂ.ಆರ್.ಅವರು ಕಳೆದ ಎರಡು ದಿನಗಳ ಹಿಂದೆಯಷ್ಟೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಿಂದ ಚುನಾವಣಾ ಹಿನ್ನೆಲೆಯಲ್ಲಿ ಇವರನ್ನು ಬೆಳ್ತಂಗಡಿ ಠಾಣೆಗೆ ಸರಕಾರ ವರ್ಗಾಯಿಸಿತ್ತು.ಸುಳ್ಯ ಠಾಣಾಧಿಕಾರಿಯಾಗಿ ಜನ ಮೆಚ್ಚುಗೆ ಗಳಿಸಿದ್ದರು.
ಇದೀಗ ಹರೀಶ್ ಅವರು ಬೋಪಾಲ್ ನಲ್ಲಿ ನಡೆಯುವ ಅಖಿಲ ಭಾರತ ಕರ್ತವ್ಯ ಕೂಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ‌. ಜಿಲ್ಲಾ ಮಟ್ಟದಲ್ಲಿ ನಡೆದ ಸ್ಪರ್ಧೆ ಯಲ್ಲಿ ಭಾಗವಹಿಸಿ ಗೆದ್ದ ಇವರನ್ನು ರಾಜ್ಯದಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಲು ಸೂಚಿಸಿದ್ದರು .
‌‌ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಗೋಲ್ಡ್ ಹಾಗೂ ಸಿಲ್ವರ್ ಮೆಡಲ್ ಪಡೆದಿದ್ದರು. ಇದೀಗ ದ.ಕ.ಜಿಲ್ಲೆಯಿಂದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಕಳುಹಿಸಿಕೊಡಲಾಗುತ್ತಿದೆ.
ಫೆ. 5 ರಂದು ಬೆಂಗಳೂರಿನಲ್ಲಿ ರಿಪೋರ್ಟ್ ಮಾಡಲು ಇಲಾಖೆ ಸೂಚಿಸಿದ್ದು, ಮೂರು ದಿನಗಳ ಕಾಲ ಇಲ್ಲಿ ತರಬೇತಿಯನ್ನು ನೀಡಲಾಗುತ್ತದೆ. ಅಲ್ಲಿಂದ ಫೆ.10 ತಾರೀಖಿಗೆ ಬೋಪಾಲ್ ಗೆ ಆಗಮಿಸಿಬೇಕು.ರಾಜ್ಯದಿಂದ ದ.ಕ.ಜಿಲ್ಲೆಯ ಪೋಲೀಸ್ ಆಫೀಸರ್ ಓರ್ವ ರಾಷ್ಟ್ರ. ಮಟ್ಟದ ಪೋಲೀಸ್ ಇಲಾಖೆಯ ಬಹುಮುಖ್ಯವಾದ ವಿಷಯದಲ್ಲಿ ಪರೀಕ್ಷೆ ಬರೆಯಲು ಹೊರಟಿರುವ ಇವರ ಭವಿಷ್ಯ ಉಜ್ವಲವಾಗಲಿ ಎಂಬುದೇ ನಮ್ಮೆಲ್ಲರ ಆಶಯ

Leave a Response

error: Content is protected !!