ರಾಜ್ಯ

ಅಡ್ಕಾರಿನಲ್ಲಿ ಮನೆ ದರೋಡೆ: ನಗದು ನಾಪತ್ತೆ:
ಪೊಲೀಸ್ ದೂರು ದಾಖಲು.

ಮನೆಯಲ್ಲಿ ಯಾರೂ ಇಲ್ಲದ ಸಂದರ್ಭವನ್ನು ಗುರುತಿಸಿ ರಾತ್ರಿ ಸಮಯದಲ್ಲಿ ಮನೆಯ ಬೀಗ ಮುರಿದು ನಗದು ಕಳ್ಳತನ ಮಾಡಿರುವ ಘಟನೆ ಜಾಲ್ಸೂರು ಗ್ರಾಮದ ಅಡ್ಕಾರಿನಲ್ಲಿ ಜು.1ರಂದು ನಡೆದಿದೆ ಈ ಬಗ್ಗೆ ಕಳ್ಳತನಕ್ಕೆ ಒಳಗಾದ ಮನೆ ಮಾಲಕ ಪೊಲೀಸ್ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ ಪೊಲೀಸರು ಸ್ಥಳಕ್ಕೆ ತೆರಳಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಘಟನೆ ವಿವರ

ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಅಡ್ಕಾರಿನ ಮಹಮ್ಮದ್ ನಜೀಬ್ ಅವರು ತಮ್ಮ ಹೆಂಡತಿಯ ತವರು ಮನೆಯಾದ ಪುತ್ತೂರಿಗೆ ಜು.1ರಂದು ಸಂಜೆ ಮನೆಗೆ ಬೀಗ ಹಾಕಿ ತೆರಳಿದ್ದರೆನ್ನಲಾಗಿದೆ. ಮರುದಿನ ಜು.2ರಂದು ಬೆಳಿಗ್ಗೆ ಪುತ್ತೂರಿನಿಂದ ಮರಳಿ ಮನೆಗೆ ಬಂದಾಗ ಮನೆಯ ಬಾಗಿಲಿನ ಲಾಕ್ ಮುರಿದಿದ್ದು, ಒಳಗೆ ಹೋಗಿ ನೋಡಿದಾಗ ಮನೆಯ ಕವಾಟಿನಲ್ಲಿ ಇರಿಸಿದ್ದ ಸುಮಾರು ಎಂಭತ್ತು ಸಾವಿರ ರೂ. ನಗದು ಹಾಗೂ ಹಾಗೂ ನಜೀಬ್ ಅವರ ತಾಯಿಯ ಕೋಣೆಯ ಕವಾಟಿನಲ್ಲಿ ಇರಿಸಿದ್ದ ಹದಿನೈದು ಸಾವಿರ ರೂ. ನಗದು ಸೇರಿ ಒಟ್ಟು
ತೊಂಭತ್ತೈದು ಸಾವಿರ ರೂ. ನಗದು ಹಣ ಕಳವಾಗಿದೆ
ಮನೆಯಲ್ಲಿ ಯಾರೂ ಇಲ್ಲದ ವೇಳೆಗೆ ಕಳ್ಳರ ಗುಂಪು ಮನೆಯ ಬೀಗ ಮುರಿದು ಈ ಕೃತ್ಯ ಎಸಗಿದ್ದು, ಇತ್ತೀಚೆಗಷ್ಟೇ ಅಡ್ಕಾರಿನಲ್ಲಿ ಇನ್ನೆರಡು ಮನೆಗಳಲ್ಲಿ ಕಳ್ಳತನ ಪ್ರಕರಣ ನಡೆದಿದ್ದು, ಕಳ್ಳರ ಪತ್ತೆ ಹಚ್ಚುವುದು ಪೋಲಿಸರಿಗೆ ಸವಾಲಿನ ಕೆಲಸವಾಗಿದೆ.

Leave a Response

error: Content is protected !!