ಜ:8 ರಂದು ಸುಳ್ಯದಲ್ಲಿ ಆಮ್ ಆದ್ಮಿ ಪಕ್ಷದ ಸಭೆ:ಸುಮನಾ ಬೆಳ್ಳಾರ್ಕರ್ . ಭ್ರಷ್ಟಾಚಾರ ವಿರೋಧಿ ನೀತಿ , ಅಭಿವೃದ್ದಿ ಕ್ರಾಂತಿ ನಮ್ಮಗುರಿ: ರಶೀದ್ ಜಟ್ಟಿಪಳ್ಳ.


ಜ.8 ರಂದು ಆಮ್ ಆದ್ಮಿ ಪಕ್ಷದ ಸಭೆ ನಡೆಯಲಿದ್ದು, ಕೇವಲ ಹತ್ತು ವರುಷದಲ್ಲಿ ರಾಷ್ಟ್ರೀಯ ಪಕ್ಷವಾಗಿ ಹೊರ ಹೊಮ್ಮಿರುವ ಆಮ್ ಆದ್ಮಿಯ ಪಕ್ಷದ ಸಂಭ್ರಮಾಚರಣೆ , ಮತ್ತು ವಿವಿಧ ಪಕ್ಷದಲ್ಲಿ ಕಾರ್ಯಕರ್ತರಾಗಿದ್ದು ಆಮ್ ಆದ್ಮಿಪಕ್ಷದ ಕೆಲಸವನ್ನು ಮೆಚ್ಚಿ ಹಲವಾರು ಮಂದಿ ಆಮ್ ಆದ್ಮಿಪಕ್ಷವನ್ನು ಸೇರ್ಪಡೆಯಾಗುವ ಕಾರ್ಯಕ್ರಮ ನಡೆಯಲಿದೆ ಅಲ್ಲದೆ ಸಭೆಯಲ್ಲಿ ಮುಂಬರುವ ವಿಧಾನಸಭೆ, ಜಿ.ಪಂ., ತಾ.ಪಂ. ಚುನಾವಣೆಯ ಸ್ಪರ್ಧಾಕಾಂಕ್ಷಿಗಳ ಬಗ್ಗೆ ಪೂರ್ವಭಾವಿ ಚರ್ಚೆ ನಡೆಯಲಿದೆ ಎಂದು ಎಎಪಿ ಸುಳ್ಯದ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.ಪತ್ರಿಕಾಗೋಷ್ಠಿಯನ್ನು
ಉದ್ದೇಶಿಸಿ ಮಾತನಾಡಿದ ಎಎಪಿ ಸುಳ್ಯ ವಿಧಾನಸಭಾ ಕ್ಷೇತ್ರದ ಸೇವಾಕಾಂಕ್ಷಿ ಶ್ರೀಮತಿ ಸುಮನಾ ಬೆಳ್ಳಾರ್ಕರ್ ಜ. 8 ರಂದು ಸುಳ್ಯದ ವರ್ತಕರ ಸಂಘದ ಸಭಾಂಗಣದಲ್ಲಿ ಕಾರ್ಯಕರ್ತರ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಪಕ್ಷದ ರಾಜ್ಯ ಮತ್ತು ಜಿಲ್ಲಾ ಹಾಗೂ ತಾಲೂಕು ಮಟ್ಟದ ಮುಖಂಡರು ಭಾಗವಹಿಸಲಿದ್ದಾರೆ. ಭ್ರಷ್ಟಾಚಾರ
ವಿರೋಧಿಯಾಗಿ ಕ್ರಾಂತಿಕಾರಿ ಅಭಿವೃದ್ಧಿ ಕೆಲಸ ಮಾಡುತ್ತಿರು ಆಮ್ ಆದ್ಮಿ ಪಕ್ಷ ಈಗಾಗಲೆ ದೆಹಲಿ ಮತ್ತು ಪಂಜಾಬ್‌ನಲ್ಲಿ ಅಧಿಕಾರ ಹಿಡಿದಿದ್ದು, ಗುಜರಾತ್‌ನಲ್ಲಿ ಶೇ. 13 ಮತ ಹಾಗೂ 5 ಶಾಸಕರು, ಗೋವಾದಲ್ಲಿ ಇಬ್ಬರು

ಶಾಸಕರನ್ನು ಪಡೆದು ಕೇವಲ 10 ವರ್ಷದಲ್ಲಿ
ರಾಷ್ಟ್ರೀಯ ಪಕ್ಷವಾಗಿ ಮಾನ್ಯತೆ ಪಡೆದಿದ್ದೇವೆ ಎಂದರು.
ನಾವೆಲ್ಲ ಪಕ್ಷ ಚಿಂತನೆ ಅಭವೃದ್ದಿಯನ್ನು ಕಂಡು ಆಮ್ ಆದ್ಮಿ ಪಕ್ಷಕೆ ಆಕರ್ಷಿತರಾಗಿ ಬಂದಿದ್ದೇವೆ ಹೊರತು ಬೇರೆ ಪಕ್ಷಗಳಲ್ಲಿ ರೀತಿ ಕರೆದು ತರುವ ಕೆಲಸ ಇಲ್ಲಿ ಇಲ್ಲ ಎಂದು ಖಲಂದರ್ ಎಲಿಮಲೆ, ಮತ್ತು ಗುರುಪ್ರಸಾದ್ ಮೇರ್ಕಜೆ ಹೇಳಿದರು.

ರಶೀದ್ ಜಟ್ಟಿಪಳ್ಳ ಮಾತನಾಡಿ, ದಕ್ಷಿಣ ಕನ್ನಡ
ಜಿಲ್ಲೆಯ ಮೂಲ ಬೆಳೆ ಅಡಿಕೆ ಇಲ್ಲಿನ ಜನರು ಅಡಿಕೆ ಬೆಳೆದೆರೆನೇ ಜೀವನ ಸಾಗುವುದು. ರಾಜ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಬಿಜೆಪಿ ಕೋಟೆ ಆದರೆ ಅದೇ ಜಿಲ್ಲೆಯ ಬೆಳೆಗೆ ಬಿಜೆಪಿಯ ಗೃಹ ಸಚಿವರು ಅಡಿಕೆ ಬೆಳೆಯ ವಿರುದ್ಧ ಮಾತನಾಡಿದ್ದಾರೆ. ದಕ್ಷಿಣ ಕನ್ನಡದವರನ್ನು ಉದ್ದೇಶ ಇರಿಸಿ ಈ ರೀತಿ ಮಾತನಾಡಿದ್ದಾರೆ ,ಅಡಿಕೆ ಬೆಳೆಗೆ ಬಂದಿರುವ ರೋಗದ ಪರಿಹಾರಕ್ಕೆ ಸರಕಾರ ಪ್ರಯತ್ನಿಸಬೇಕಿತ್ತು.ಆದರೆ ಅಡಿಕೆಗೆ ಪ್ರೋತ್ಸಾಹ ನೀಡಬಾರದೆಂದು ಹೇಳುವ ಮೂಲಕ ಅವರ ಪಕ್ಷದ ನಿಜವಾದ ಚಿಂತನೆಯನ್ನು ಹೊರಗೆಡಹಿದ್ದಾರೆ.ಕೂಡಲೆ ಈ ಮಾತನ್ನು ಗೃಹ ಸಚಿವರು ಹಿಂಪಡೆಯಬೇಕು ಎಂದರು , ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ನಮಗೆ ಮತದಾರರು ಮತ ಚಲಾಯಿಸಿ ಗೆಲುವು ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು,

ಗ್ರಾಮ ಸಂಪರ್ಕ ಸಂಯೋಜಕ ಗಣೇಶ್ ಪ್ರಸಾದ್, ಮಾತನಾಡಿ ಈಗಾಗಲೆ ಪಕ್ಷ ಮಿಸ್ಡ್ ಕಾಲ್ ಅಭಿಯಾನ ಹಮ್ಮಿಕೊಂಡಿದೆ ತಾಲೋಕಿನಲ್ಲಿ 500 ಕ್ಕೂ ಮಿಕ್ಕಿ ಜನರು ಸೇರ್ಪಡೆಯಾಗುವ ಇಂಗಿತ ವ್ಯಕ್ತ ಪಡಿಸಿದ್ದಾರೆ.ಪಕ್ಷ ಭಲವರ್ಧನೆಗೆ ಗ್ರಾಮಮಟ್ಟದಲ್ಲಿ ಒತ್ತು ನೀಡಲಿದ್ದೇವೆ ಎಂದರು. ತಾಲೂಕು ಜತೆ ಕಾರ್ಯದರ್ಶಿ ಸಂಶುದ್ದೀನ್, ಡಿ.ಎಂ.ಶಾರೀಖ್ ಮತ್ತಿತರರು ಉಪಸ್ಥಿತರಿದ್ದರು.