

ಸುಳ್ಯ ಅಮ್ ಅದ್ಮಿ ಪಕ್ಷದ ವತಿಯಿಂದ ಇಂದು
ಸುಳ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಶ್ರೀಮತಿ ಶೈಲಜಾ ಇವರನ್ನು ಭೇಟಿಯಾಗಿ ಗೃಹ ಲಕ್ಷೀ ಯೋಜನೆಯಲ್ಲಿ ಹಲವಾರು ಮಹಿಳೆಯರಿಗೆ ಇನ್ನೂ ಸಹ
ಸಹಾಯ ಧನ ಬರದೆ ಇರುವ ವಿಚಾರವಾಗಿ ವಿಸ್ತೃತವಾಗಿ ಚರ್ಚೆ ಮಾಡಲಾಯಿತು, ಹಲವಾರು ತಾಂತ್ರಿಕ ತೊಂದರೆ ಮತ್ತು ಕೆಲವು ಫಲಾನುಭವಿಯರು ಕೊಟ್ಟ ದಾಖಲೆಗಳು ತಾಳೆ ಇಲ್ಲದ್ದು, ಇನ್ನೂ ಕೆಲವರ ದಾಖಲೆಗಳು ಸರಿ
ಇದ್ದರೂ ಹಣ ಬಾರದೆ ಇರುವುದು. ತಾಂತ್ರಿಕ ದೋಷಗಳಿಂದ ಸರಿಯಾದ ವಿಲೇವಾರಿ ಆಗದೆ
ಇರುವುದರಿಂದ ಸಮಸ್ಯೆ ಎದುರಾಗಿದೆ. ಆದದರೂ ಈ
ತಿಂಗಳ ಅಂತಿಮ ದಿನಗಳಲ್ಲಿ ಎಲ್ಲಾ ಸಮಸ್ಯೆಗಳು ಪರಿಹಾರ ಆಗುವ ಮಟ್ಟಿಗೆ ನಮ್ಮ ಪ್ರಯತ್ನ
ಅಗಲಿದೆ ಎಂದರು.
ಸರಕಾರ ಅದಷ್ಟೂ ಬೇಗನೆ ಸಮಸ್ಯೆ ಪರಿಹರಿಸಿ ಅರ್ಜಿಹಾಕಿದ ಎಲ್ಲಾ ಮಹಿಳೆಯರಿಗೆ ಸೌಲಬ್ಯದ ಮೊತ್ತ ದೊರಕಿಸಿಕೊಡುವತ್ತ ಗಮನ
ಹರಿಸಬೇಕು, ಮುಂದಕ್ಕೂ ಸಮಸ್ಯೆ ಮುಂದುವರಿದರೆ ಪ್ರತಿಭಟನೆ ಮಾಡಬೇಕಾದ ಅನಿವಾರ್ಯ ಆಗಬಹುದು ಎಂಬ ಸಂದೇಶ
ಮನವಿ ಮೂಲಕ ಅಮ್ ಅದ್ಮಿ ಪಕ್ಷದ ವತಿಯಿಂದ ತಿಳಿಸಲಾಯಿತು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ
ರಶೀದ್ ಜಟ್ಟಿಪಳ್ಳ ಕಲಂದರ್ ಎಲಿ ಮಲೆ
ಗಣೇಶ್ ಪ್ರಸಾದ್ ಪೈಸಲ್ ಜೆಟಿಪಿ ಉಪಸ್ಥಿತರಿದ್ದರು