ರಾಜ್ಯ

ಎ.24 ರಿಂದ ಆದಿಚುಂಚನಗಿರಿ ಶಾಖಾ ಮಠ ಶಿವಮೊಗ್ಗದಲ್ಲಿ ಉಚಿತ ಪೂಜಾ ವಿಧಾನ ಅಭ್ಯಾಸ ತರಬೇತಿ ಕಾರ್ಯಾಗಾರ.

ಶ್ರೀ ಆದಿಚುಂಚನಗಿರಿ ಶಾಖಾ ಮಠ ಹಾಗೂ ಶ್ರೀ ಕಾಲಭೈರವೇಶ್ವರ ದೇವಸ್ಥಾನ, ಶರಾವತಿ ನಗರ, ಶಿವಮೊಗ್ಗದಲ್ಲಿ ಎ.24 ರ ಸೋಮವಾರ ದಿಂದ ಆರಂಭಗೊಂಡು 12 ದಿನಗಳ ಕಾಲ ಉಚಿತ ಪೂಜಾ ವಿಧಾನ ಅಭ್ಯಾಸ ತರಬೇತಿ ಕಾರ್ಯಾಗಾರ ವನ್ನು ಶಿವಮೊಗ್ಗದ ಶರಾವತಿ ನಗರದಲ್ಲಿರುವ ಶ್ರೀ ಕಾಲಭೈರವೇಶ್ವರ ದೇವಸ್ಥಾನ ದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಾಗಾರಕ್ಕೆ 12 ರಿಂದ 15 ವಯಸ್ಸಿನ ಬಾಲಕರಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಹಾಗಾಗಿ ಆಸಕ್ತರು ಎ. 21 ನೋಂದಣಿ ಮಾಡಿಕೊಳ್ಳಬೇಕು. ಕೇವಲ 40 ಬಾಲಕರಿಗೆ ಮಾತ್ರ ಅವಕಾಶ. ಮೊದಲು ಬಂದವರಿಗೆ ಆದ್ಯತೆ . ಈ ಕೂಡಲೇ ಹೆಸರನ್ನು ನೋಂದಾಯಿಸಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:- ದೂರವಾಣಿ ಸಂಖ್ಯೆ- 9686349534, 9739744430, 9902410112 ವಿಶೇಷ ಸೂಚನೆ:-ಮಕ್ಕಳು ಬರಬೇಕಾದರೆ ಬಿಳಿ ಪಂಚೆ, ಶಲ್ಯ, ಘಂಟೆ. ಆರತಿ, ಪಂಚಪಾತ್ರೆ ಉದ್ಧರಣೆ,ತಟ್ಟೆ- 1,ವಿಭೂತಿ ಗಟ್ಟಿ-1, ಚಿಕ್ಕ ಟವಲ್, ಒಂದು ನೋಟ್ ಬುಕ್, ಪೆನ್ನು, ಪೂಜೆಗೆ ಬರುವಾಗ ತರಬೇಕಾಗಿ ವಿನಂತಿ.ಬೆಳಿಗ್ಗೆ ಮಕ್ಕಳಿಗೆ ಉಪಾಹಾರದ ವ್ಯವಸ್ಥೆ ಇರುತ್ತದೆ.

Leave a Response

error: Content is protected !!