ಎ.18 ರಂದು ನಾಮಪತ್ರ ಸಲ್ಲಿಸಲಿರುವ ಸುಳ್ಯ ವಿಧಾನ ಸಭಾಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಾಗಿರಥಿ ಮುರುಳ್ಯ:
ಸಾಥ್ ನೀಡಲಿದ್ದಾರೆ ತಮಿಳುನಾಡು ಬಿ ಜೆ ಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ..!


ವಿಧಾನ ಸಭಾ ಚುನಾವಣೆಗೆ ಸುಳ್ಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕು.ಭಾಗೀರಥಿ ಮುರುಳ್ಯ ಎ.18ರಂದು ನಾಮಪತ್ರ ಸಲ್ಲಿಸಲಿದ್ದಾರೆ.ಅಂದು ವಿಶೇಷವಾಗಿ ಕರ್ನಾಟಕ ಸರಕಾರದ ಮಾಜಿ ಐಪಿಎಸ್ ಅಧಿಕಾರಿ, ತಮಿಳುನಾಡು ಬಿ ಜೆ ಪಿ ರಾಜ್ಯಾಧಕ್ಷ, ಸಿಂಗಂ ಖ್ಯಾತಿಯ ಅಣ್ಣಮಲೈ ಆಗಮಿಸಲಿದ್ದಾರೆ ಎಂದು ತಿಳಿದು ಬಂದಿದೆ .ಅಲ್ಲದೆ ರಾಜ್ಯಮಟ್ಟದ ಹಿರಿಯ ಕಿರಿಯ ನಾಯಕರು ಸುಳ್ಯಕ್ಕೆ ಬರಲಿದ್ದಾರೆ
ಅಂದು ಬೆಳಗ್ಗೆ ದೊಡ್ಡ ಸಂಖ್ಯೆಯಲ್ಲಿ ಸುಳ್ಯದಲ್ಲಿ ಮೆರವಣಿಗೆ ನಡೆಯಲಿದ್ದು , ಮಧ್ಯಾಹ್ನ 12 ಗಂಟೆಗೆ ನಾಮಪತ್ರ ಸಲ್ಲಿಸಲಾಗುತ್ತದೆ.

add a comment