ರಾಜ್ಯ

10 ನೇ ವರುಷಕ್ಕೆ ಕಾಲಿಟ್ಟ ಸುಳ್ಯದ ಹೆಸರಾಂತ ಜವಳಿ ಮಳಿಗೆ ಕುಂ ಕುಂ ಫ್ಯಾಶನ್ ಇಂದು ನವೀಕರಣಗೊಂಡು ಶುಭಾರಂಭ.

ಸುಳ್ಯದ ಹೆಸರಾಂತ ವಸ್ತ್ರ ಮಳಿಗೆ ಕುಂಕುಂ… ಫ್ಯಾಶನ್ ಸುಳ್ಯದ ಬಾಳೆಮಕ್ಕಿಯಲ್ಲಿ ಕಾರ್ಯ ನಿರ್ವಹಿಸಿ
10 ವರ್ಷಗಳನ್ನು ಪೂರೈಸಿದ್ದು, ಇದೀಗ ಸಂಸ್ಥೆಯು
ನವೀಕರಣಗೊಂಡಿದ್ದು, ಇದರ ಶುಭಾರಂಭ ಕಾರ್ಯಕ್ರಮ ಇಂದು ನಡೆಯಿತು. ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್ ಸಂಸ್ಥೆಯನ್ನು ಇಂದು ಉದ್ಘಾಟಿಸಿ ಶುಭಹಾರೈಸಿದರು ಕುಂಕುಂ ಫ್ಯಾಷನ್ ಇಂದು ತಾಲೂಕಿನಲ್ಲಿ ಎಲ್ಲರ ಅಚ್ಚು ಮೆಚ್ಚಿನ ಮಳಿಗೆಯಾಗಿದೆ ಎಂದರು. ಕುಂಕುಂ ಫ್ಯಾಷನ್ ವಸ್ತ್ರ ಮಳಿಗೆಯು ದಶಕಗಳಿಂದಗ್ರಾಹಕರ ಅಚ್ಚುಮೆಚ್ಚಿನ ವಸ್ತ್ರ ಮಳಿಗೆಯಾಗಿ ಹೆಸರು ಪಡೆದುಕೊಂಡಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಸಿಆರ್ ಪಿ ಎಫ್ ನ 11 ಮಂದಿ ಯೋಧರು ಆಗಮಿಸಿ ಸಂಸ್ಥೆಯನ್ನು ಲೋಕಾರ್ಪಣೆಳಿಸಿ ಶುಭ ಹಾರೈಸಿದರು.
ಸಂಸ್ಥೆಯ ಮಾಲಕರಾದ ಭೀಮ್ ರಾಮ್ ಪಟೇಲ್ ಹಾಗೂ ಧನ್ ರಾಂ ಪಟೇಲ್ ರವರು ಯೋಧರನ್ನು ಶಾಲು, ಫಲಪುಷ್ಪ ಸ್ಮರಣಿಕೆ ನೀಡಿ ಗೌರವಿಸಿದರು. ಹೊಸ ವರ್ಷ, ಜಾತ್ರೆ, ಹಬ್ಬಗಳ ಸಂಭ್ರಮದ ಭರ್ಜರಿ ಮಾರಾಟದ ಬಳಕ ಇದೀಗ ಗ್ರಾಹಕರಿಗಾಗಿ ವಿಶೇಷ ದರ ಕಡಿತ ಮಾರಾಟವನ್ನು ಸಂಸ್ಥೆಯು ಘೋಷಿಸಿ, ಬಳಿಕ ಸ್ಟಾಕ್ ಕ್ಲಿಯರೆನ್ಸ್ ಮತ್ತು ದರ ಕಡಿತ ಮಾರಾಟ ಗ್ರಾಹಕರಿಗಾಗಿನೀಡಿತ್ತು. ಹಬ್ಬಗಳು ಸೇರಿ ವರ್ಷ ಪೂರ್ತಿ ಕುಂ ಕುಂ ಫ್ಯಾಷನ್ ಆಕರ್ಷಕ ದರ ಕಡಿತ ಮಾರಾಟ ಹಾಗು ಬಹುಮಾನಗಳ ಮಹಾಪೂರವೇ ತನ್ನ ಸಂಸ್ಥೆಯ ಗ್ರಾಹಕರಿಗೆ ಒದಗಿಸಿದೆ.


ಸುಳ್ಯ ನಗರದ ಮುಖ್ಯ ರಸ್ತೆಯಲ್ಲಿ ದ್ವಾರಕಾ ಹೋಟೆಲ್
ಮುಂಭಾಗದ ಶುಭಾ ಕಾಂಪ್ಲೆಕ್ಸ್‌ನ ವಿಶಾಲ ವಸ್ತ್ರಮಳಿಗೆ
ಕುಂ ಕುಂ ನಲ್ಲಿ ಆಕರ್ಷಕ ಬಣ್ಣದ, ವಿನ್ಯಾಸದ ವಸ್ತ್ರಗಳ
ಸಂಗ್ರಹವೇ ಇದೆ. ಮಕ್ಕಳ, ಮಹಿಳೆಯರ, ಪುರುಷರ ಹೀಗೆ ಎಲ್ಲಾ ಪ್ರಾಯದ ಎಲ್ಲಾ ವಿಭಾಗಗಳ ಜನರ ಮನಸ್ಸಿಗೆ ಒಪ್ಪುವ ಆಧುನಿಕ ಫ್ಯಾಷನ್ ವಸ್ತ್ರಗಳ ಅದ್ಭುತ ವಸ್ತ್ರಗಳ ಸಂಗ್ರಹ ಇಲ್ಲಿದೆ. ವಿವಿಧ ಕಂಪೆನಿಗಳ ಎಲ್ಲಾ ವಿಧದ ಬ್ರಾಂಡೆಡ್ ಬಟ್ಟೆಗಳ ಅಪೂರ್ವ ಸಂಗ್ರವು ಇದೆ. ಗೃಹಪ್ರವೇಶ ಮತ್ತು ಮದುವೆ ಜವಳಿಗಳ ಸಂಗ್ರವು ಇದೆ.

Leave a Response

error: Content is protected !!