ಕ್ರೀಡೆ

ರವೀಂದ್ರ ಜಡೇಜ ಸ್ಪಿನ್ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ.ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ದ್ವಿತೀಯ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ದ ಭಾರತಕ್ಕೆ 6 ವಿಕೇಟ್ ಗಳ ಸುಲಭ ಜಯ.

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂ ನಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ದ ಭಾರತ ತಂಡ ಜಯಗಳಿಸುಸುವ ಮೂಲಕ 4 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಿಸಿದ ಆಸ್ಟ್ರೇಲಿಯಾ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 263 ರನ್ ಗಳಿಸಿ ಅಲ್ ಔಟ್ ಆಯಿತು.ಆಸ್ಟ್ರೇಲಿಯಾ ಪರ ಉಸ್ಮಾನ್ ಖವಾಜಾ 81 ಮತ್ತು ಪೀಟರ್ ಹ್ಯಾಂಡ್ಸ್ಕಾಂಬ್ ಅಜೇಯ 72 ರನ್, ನಾಯಕ ಪ್ಯಾಟ್ ಕಮಿನ್ಸ್ 33 ರನ್ ಗಳಿಸಿದರು. ಮೊದಲ ಪಂದ್ಯದಂತೆ ಈ ಪಂದ್ಯದಲ್ಲಿ ಕೂಡ ಉಳಿದ ಆಟಗಾರರು ಭಾರತದ ಸ್ಪಿನ್ ದಾಳಿಯನ್ನು ಎದುರಿಸಲು ವಿಫಲರಾದರು.

ಭಾರತದ ಪರ ಮೊಹಮ್ಮದ್ ಶಮಿ 4, ಅಶ್ವಿನ್ ಮತ್ತು ಜಡೇಜ ತಲಾ 3 ವಿಕೇಟ್ ಪಡೆದರು.

ಸಾಧಾರಣ ರನ್ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ ಆರಂಭದಲ್ಲೇ ತನ್ನ ಪ್ರಮುಖ ವಿಕೆಟುಗಳನ್ನು ಕಳೆದುಕೊಂಡಿತು. ಆರಂಭಿಕ ಆಟಗಾರ ಕೆ ಎಲ್ ರಾಹುಲ್ ಈ ಪಂದ್ಯದಲ್ಲೂ 17 ರನ್ ಗಳಿಸಿ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದರು. ನಾಯಕ ರೋಹಿತ್ ಶರ್ಮಾ 33 ರನ್ ಗಳಿಸಿ ಔಟಾದರೆ ಪೂಜಾರ ಶೂನ್ಯ ಸಂಪಾದನೆ ಮಾಡಿ ಔಟಾದರು. ವಿರಾಟ್ ಕೋಹ್ಲಿ 44 ರನ್ ಗಳಿಸಿ ಅನುಮಾನಾಸ್ಪದ ಎಲ್ ಬಿ ಡಬ್ಲ್ಯೂ ಔಟಾದರು. ನಂತರ ಬಂದ ಶ್ರೇಯಸ್ ಅಯ್ಯರ್ 4, ಭರತ್ ,5 ರನ್ ಗಳಿಸಿ ನಿರ್ಗಮಿಸಿದರು. ಜಡೇಜ ಸ್ವಲ್ಪ ಹೊತ್ತು ಉತ್ತಮ ಪ್ರದರ್ಶನ ನೀಡುವ ಮೂಲಕ 26 ರನ್ ಗಳಿಸಿ ಔಟ್ ಆಗುವ ಮೂಲಕ ಭಾರತ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿ ಹುಟ್ಟಿಸಿದರು. ನಂತರ ಬಂದ ಅಕ್ಷರ್ ಪಟೇಲ್ ಮತ್ತು ಅಶ್ವಿನ್ ಶತಕದ ಜೊತೆಯಾಟವಾಡಿ ತಂಡವನ್ನು ಉತ್ತಮ ಮೊತ್ತದ ಕಡೆಗೆ ಕೊಂಡೊಯ್ದರು. ಅಂತಿಮವಾಗಿ ಅಶ್ವಿನ್ 37 ರನ್ ಗಳಿಸಿ ನಿರ್ಗಮಿಸಿದರು. ಕಠಿಣ ಪರಿಸ್ಥಿತಿಯಲ್ಲೂ ಉತ್ತಮ ಪ್ರದರ್ಶನ ನೀಡಿದ ಅಕ್ಷರ್ ಪಟೇಲ್ 74 ರನ್ ಗಳಿಸಿ ಔಟ್ ಆದರು ನಂತರ ಬಂದ ಶಮಿ ಮತ್ತು ಸಿರಾಜ್ ಹೆಚ್ಚು ಹೊತ್ತು ನಿಲ್ಲದೆ ಔಟ್ ಆಗುವ ಮೂಲಕ ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 1 ರನ್ ಹಿನ್ನಡೆ ಸಾಧಿಸಿ 262 ರನ್ ಗಳಿಗೆ ಅಲ್ ಔಟ್ ಆಯಿತು.

ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡ ರವೀಂದ್ರ ಜಡೇಜ ಸ್ಪಿನ್ ದಾಳಿಗೆ ತತ್ತರಿಸಿ 113 ರನ್ ಗೆ ಅಲ್ ಔಟ್ ಆಯಿತು. ರವೀಂದ್ರ ಜಡೇಜ 7 ವಿಕೇಟ್ ಪಡೆದು ಮಿಂಚಿದರೆ ಅಶ್ವಿನ್ 3 ವಿಕೇಟ್ ಪಡೆದರು.

115 ರನ್ ಗಳ ಸುಲಭ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ ಮೊದಲ ಇನ್ನಿಂಗ್ಸ್ ನಂತೆ ಆರಂಭಿಕ ಆಟಗಾರ ಕೆ ಎಲ್ ರಾಹುಲ್ ವೈಫಲ್ಯದ ನಡುವೆ 4 ವಿಕೇಟ್ ಕಳೆದು ಗುರಿ ತಲುಪಿತು. ಇದರೊಂದಿಗೆ 4 ಪಂದ್ಯಗಳ ಸರಣಿಯಲ್ಲಿ 2 ಪಂದ್ಯ ಗೆಲ್ಲುವ ಮೂಲಕ ಮುನ್ನಡೆ ಸಾಧಿಸಿದೆ.

ದ್ವಿತೀಯ ಇನ್ನಿಂಗ್ಸ್ ನಲ್ಲಿ ನಾಯಕ ರೋಹಿತ್ ಶರ್ಮಾ 31ರನ್ ರಾಹುಲ್ 1, ಪೂಜಾರ 31, ವಿರಾಟ್ ಕೋಹ್ಲಿ 20 ಶ್ರೇಯಸ್ ಅಯ್ಯರ್ 12, ಭರತ್ 23 ರನ್ ಗಳಿಸಿದರು.

ಮೊದಲ ಇನ್ನಿಂಗ್ಸ್ ನಲ್ಲಿ 3 ಮತ್ತು ದ್ವಿತೀಯ ಇನ್ನಿಂಗ್ಸ್ ನಲ್ಲಿ 7 ವಿಕೇಟ್ ಪಡೆದ ರವೀಂದ್ರ ಜಡೇಜ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಮುಂದಿನ ಪಂದ್ಯ ಮಾರ್ಚ್ 1 ರಿಂದ ಮದ್ಯಪ್ರದೇಶದ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆಯಲಿದೆ.

Leave a Response

error: Content is protected !!